ಚೆಟ್ಟಳ್ಳಿ, ಜೂ. ೧೨: ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದ ನೂತನ ಮುಖ್ಯಸ್ಥರಾಗಿ ಕಾಫಿ ಮಂಡಳಿಯ ಜಂಟಿ ನಿರ್ದೇಶಕ (ಸಂಶೋಧನೆ) ಡಾ. ಸಿ. ಬಾಬು ಅಧಿಕಾರ ಸ್ವೀಕರಿಸಿದ್ದಾರೆ.
ಈ ಹಿಂದೆ ಕೇಂದ್ರದ ಮುಖ್ಯಸ್ಥರಾಗಿ ಉಪ ನಿರ್ದೇಶಕಿ ಡಾ. ಜೀನಾ ದೇವಸಿಯಾ ಕಾರ್ಯನಿರ್ವಹಿಸುತ್ತಿದ್ದರು. ಅವರು ಚಿಕ್ಕಮಗಳೂರಿನ ಕಾಫಿ ಸಂಶೋಧನಾ ಕೇಂದ್ರಕ್ಕೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಡಾ. ಸಿ. ಬಾಬು ಅವರನ್ನು ಕೇಂದ್ರದ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.
ಡಾ. ಬಾಬು ಅವರು ೨೦೧೨ರಲ್ಲಿ ಚಿಕ್ಕಮಗಳೂರಿನ ಕಾಫಿ ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ೨೦೧೭ ರಲ್ಲಿ ಕೇರಳದ ವೈನಾಡಿನ ಕಾಫಿ ಸಂಶೋಧನಾ ಕೇಂದ್ರದಲ್ಲಿ ಹಿರಿಯ ವಿಜ್ಞಾನಿಯಾಗಿ, ೨೦೧೯ ರಲ್ಲಿ ತಮಿಳುನಾಡಿನ ಕಾಫಿ ಸಂಶೋಧನಾ ಕೇಂದ್ರದಲ್ಲಿ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಅವರು, ೨೦೨೨ ರಲ್ಲಿ ಕೇಂದ್ರದ ಬೇಸಾಯ ಶಾಸ್ತç ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.
೨೦೨೫ ರಲ್ಲಿ ಚಿಕ್ಕಮಗಳೂರಿನ ಕಾಫಿ ಸಂಶೋಧನಾ ಕೇಂದ್ರದಲ್ಲಿ ಜಂಟಿ ನಿರ್ದೇಶಕ (ಸಂಶೋಧನೆ) ಹುದ್ದೆ ವಹಿಸಿಕೊಂಡಿದ್ದ ಡಾ. ಬಾಬು ಅವರಿಗೆ ಇದೀಗ ಚೆಟ್ಟಳ್ಳಿ ಕಾಫಿ ಉಪ ಸಂಶೋಧನಾ ಕೇಂದ್ರದ ಮುಖ್ಯಸ್ಥರ ಜವಾಬ್ದಾರಿ ನೀಡಲಾಗಿದೆ.