ಮಡಿಕೇರಿ, ಜೂ. ೧೨: ಮಡಿಕೇರಿ ಲಯನ್ಸ್ ಸಂಸ್ಥೆಯ ೨೦೨೬-೨೭ನೇ ಸಾಲಿನ ಅಧ್ಯಕ್ಷ ರಾಗಿ ಮೋಹನ್ ಕುಮಾರ್ ಎಲ್., ಕಾರ್ಯದರ್ಶಿಯಾಗಿ ಕೆ. ಮಧುಕರ್ ಹಾಗೂ ಕೋಶಾಧಿಕಾರಿಯಾಗಿ ಅಂಬೆಕಲ್ ನವೀನ್ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ತಾ.೨೭ ರಂದು ಸಂಜೆ ೭ ಗಂಟೆಗೆ ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ನಡೆಯಲಿದೆ. ಲಯನ್ಸ್ ಜಿಲ್ಲೆ ೩೧೭ಸಿ ಯ ಪ್ರಥಮ ಉಪ ಜಿಲ್ಲಾ ಗವರ್ನರ್ ಲಯನ್ ಹರಿಪ್ರಸಾದ್ ರೈ ಅವರು ಪದಗ್ರಹಣಾಧಿಕಾರಿಯಾಗಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ದೀಕ್ಷೆಯನ್ನು ಬೋಧಿಸಲಿದ್ದಾರೆ.