ಮಡಿಕೇರಿ, ಜೂ. ೧೨: ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯಿ) ಎಸ್ಟಿಸಿ ಮಡಿಕೇರಿ ಕ್ಯಾಂಪಸ್ನಲ್ಲಿ ವಿಶ್ವ ಸೈಕಲ್ ದಿನಾಚರಣೆಯ ಅಂಗವಾಗಿ ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲï ವಿಶೇಷ ಕಾರ್ಯಕ್ರಮಕ್ಕೆ ವಕೀಲ ಗಿರಿ ಅವರು ಚಾಲನೆ ನೀಡಿದರು.
ಫಿಟ್ ಇಂಡಿಯಾ ಆಂದೋಲವನ್ನು ೨೦೧೯ರ ಆ.೨೯ ರಂದು ಪ್ರಧಾನಿ ಮೋದಿಯವರು ಆರಂಭಿಸಿದರು. ಜನರಲ್ಲಿ ವರ್ಧನಾ ಬದಲಾವಣೆಯನ್ನು ತಂದು ದೈಹಿಕ ಚಟುವಟಿಕೆಗಳನ್ನೊಳಗೊಂಡ ಜೀವನಶೈಲಿಯನ್ನು ಉತ್ತೇಜಿಸುವುದು ಇದರ ಉz್ದೆÃಶವಾಗಿತ್ತು. ಈ ಅಭಿಯಾನವು ೩೦ ಲP್ಷÀಕ್ಕೂ ಹೆಚ್ಚು ಸೈಕ್ಲಿಂಗ್ ಆಸಕ್ತರನ್ನು ತೊಡಗಿಸಿಕೊಂಡಿದ್ದು, ಸಾಮಾಜಿಕ ಮಾಧ್ಯಮ ಪ್ರಚಾರದ ಮೂಲಕ ೭ ಕೋಟಿಗೂ ಹೆಚ್ಚು ಜನರನ್ನು ತಲುಪಿದೆ. ಈ ಅಭಿಯಾನವು ಸೈಕ್ಲಿಂಗ್ ಮಾತ್ರವಲ್ಲದೆ ಯೋಗ, ಸಾಂಪ್ರದಾಯಿಕ ಕ್ರೀಡೆಗಳು ಮತ್ತು ಆರೋಗ್ಯವರ್ಧಕ ಚಟುವಟಿಕೆಗಳನ್ನು ಒಳಗೊಂಡಿದೆ ಎಂದು ಗಿರಿ ಮಾಹಿತಿ ನೀಡಿದರು.
ದೇಶಾದ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಈ ಕಾರ್ಯಕ್ರಮವು ಯುವಜನರಲ್ಲಿ ಚುರುಕು ಜೀವನಶೈಲಿಯನ್ನು ಉತ್ತೇಜಿಸುವ ಮೂಲಕ ಕ್ರೀಡಾ ಸಂಸ್ಕೃತಿಯನ್ನು ಬೆಳೆಸುವ ಫಿಟ್ ಇಂಡಿಯಾ ಚಳವಳಿಯ ಉz್ದÉÃಶವನ್ನು ಬಲಪಡಿಸಿದೆ ಎಂದು ಫಿಟ್ನೆಸ್, ಶಿಸ್ತು ಮತ್ತು ರಾಷ್ಟç ನಿರ್ಮಾಣದಲ್ಲಿ ಕ್ರೀಡೆಯ ಮಹತ್ವವನ್ನು ತಿಳಿಸಿದರು. ಈ ಸಂದರ್ಭ ಸುಮಾರು ೫೦ಕ್ಕೂ ಅಧಿಕ ವಿದ್ಯಾರ್ಥಿಗಳು ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಹಾಕಿ ತರಬೇತುದಾರರು ಮತ್ತು ಸಾಯಿ ತರಬೇತಿ ಕೇಂದ್ರದ ಆಡಳಿತಾಧಿಕಾರಿ ಮಿನಿ ಉಣ್ಣಿರಾಜ್ ಇದ್ದರು.