ಕೂಡಿಗೆ, ಜೂ. ೧೨: ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ ಕೂಡಿಗೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಂಡ್ರAಗಿ ನಾಗರಾಜ್ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಜಿಲ್ಲಾ ಶಾಲಾಶಿಕ್ಷಣ ಇಲಾಖೆಯ (ಪದವಿಪೂರ್ವ) ಉಪ ನಿರ್ದೇಶಕ ಎ. ಗಣಪತಿ, ಕಾರ್ಯದರ್ಶಿ ಮಡಿಕೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್. ವಿಜಯ್, ಖಜಾಂಚಿಯಾಗಿ ಶ್ರೀಮಂಗಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಯ್ಯ, ಉಪಾಧ್ಯಕ್ಷರಾಗಿ ಮಾದಾಪುರ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂದಪ್ಪ, ಪೊನ್ನಂಪೇಟೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗೇಶ್, ಭಾಗಮಂಡಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹೇಮಂತ್ ಕುಮಾರ್, ಪರೀಕ್ಷಾ ಸಂಯೋಜಕರಾಗಿ ಪೊನ್ನಂಪೇಟೆ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹರೀಶ್ ತಮನ್ಕರ್ ಆಯ್ಕೆಯಾಗಿರುತ್ತಾರೆ.
ಸಂಘದ ನಿರ್ದೇಶಕರಾಗಿ ಕುಶಾಲನಗರ ಐಶ್ವರ್ಯ ಕಾಲೇಜಿನ ಪ್ರಾಂಶುಪಾಲ ಜೋಯಪ್ಪ, ಮಡಿಕೇರಿ ಸಂತ ಮೈಕಲ್ ಕಾಲೇಜಿನ ಪ್ರಾಂಶುಪಾಲೆ ಪಂಕಜ, ಗೌರವ ಸಲಹೆಗಾರರಾಗಿ ಮೂರ್ನಾಡು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ದೇವಕ್ಕಿ, ನಲ್ಲಿಹುದಿಕೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎ.ವಿ. ಅಲ್ವಾರೀಸ್ ಆಯ್ಕೆಗೊಂಡಿದ್ದಾರೆ ಎಂದು ಅಧ್ಯಕ್ಷ ಹಂಡ್ರAಗಿ ನಾಗರಾಜ್ ತಿಳಿಸಿದ್ದಾರೆ.