ವೀರಾಜಪೇಟೆ, ಜೂ. ೧೨: ಕೇದಾರನಾಥ ಪ್ರವಾಸಕ್ಕೆ ತೆರಳಿದ್ದ ನಿವೃತ್ತ ಶಿಕ್ಷಕಿ ಭವಾನಿ ಹೆಚ್.ಎಂ. (೬೦) ಅವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ವಿಜಯನಗರದ ನಿವಾಸಿ ದಿ. ವಾಮನ ಅವರ ಪತ್ನಿ ಭವಾನಿ ಅವರು ತಮ್ಮ ಜೊತೆಗಾರರೊಂದಿಗೆ ಸೋಮವಾರ ವೀರಾಜಪೇಟೆಯಿಂದ ಭದರಿನಾಥ್, ಕೇದಾರನಾಥ ದೇವಾಲಯಕ್ಕೆ ಪ್ರವಾಸ ಕೈಗೊಂಡಿದ್ದರು. ಶುಕ್ರವಾರ ರುದ್ರ ಪ್ರಯೋಗರಾಜ್ ಎಂಬಲ್ಲಿ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ. ಕುಟುಂಬ ಸದಸ್ಯರು ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಇವರು ಹಾಲುಗುಂದ ಸರಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ಕಳೆದ ಹತ್ತು ದಿನಗಳ ಹಿಂದಷ್ಟೆ ನಿವೃತ್ತಿ ಹೊಂದಿದ್ದರು.