ಮಡಿಕೇರಿ, ಜೂ. ೧೧: ಮಡಿಕೇರಿ ಸಾಮಾಜಿಕ ಅರಣ್ಯ ವಲಯದ ಹೊದ್ದೂರು ವಾಟೆಕಾಡು ಸಸ್ಯಕ್ಷೇತ್ರದಲ್ಲಿ ೨೦೨೬-೨೭ನೇ ಸಾಲಿನ ಮಳೆಗಾಲದಲ್ಲಿ ನೆಡಲು ವಿವಿಧ ಹಣ್ಣಿನ, ಔಷಧೀಯ ಹಾಗೂ ಕಾಡು ಜಾತಿಯ ಸಸಿಗಳನ್ನು ಬೆಳೆಸಲಾಗಿದೆ.
ಮಹಾಗನಿ, ನೇರಳೆ, ರಕ್ತಚಂದನ, ನಿಂಬೆ, ನೆಲ್ಲಿ, ಸಂಪಿಗೆ, ಲಾವಂಚ, ಸೀಬೆ, ತೇಗ, ಹೊನ್ನೆ, ಬೀಟೆ, ಹಿಪ್ಪೆ, ಸಿಮಾರೂಬಾ, ಬಿದಿರು ಮುಂತಾದ ಸಸಿಗಳು ಲಭ್ಯವಿದ್ದು ರೈತ ಫಲಾನುಭವಿಗಳಿಗೆ ಸರ್ಕಾರದ ಹೊಸ ಪರಿಷ್ಕೃತ ಆದೇಶದಂತೆ ೮x೧೨ ಅಳತೆಯ ಗಿಡ ಒಂದಕ್ಕೆ ರೂ. ೬ ಮತ್ತು ೬x೯ ಅಳತೆಯ ಗಿಡ ಒಂದಕ್ಕೆ ರೂ. ೩ ರಂತೆ ನಿಗದಿಪಡಿಸಲಾಗಿದೆ.
ರೈತರು ತಮ್ಮ ಆಧಾರ್ ಪ್ರತಿ, ರಾಷ್ಟಿçÃಕೃತ ಬ್ಯಾಂಕ್ ಪಾಸ್‌ಬುಕ್ ಪ್ರತಿ, ತಮ್ಮ ಜಮೀನಿನ ಆರ್.ಟಿ.ಸಿ. ಪ್ರತಿಯನ್ನು ನೀಡಿ ಸಸಿ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ ಮಡಿಕೇರಿ: ಉಪ ವಲಯ ಅರಣ್ಯಾಧಿಕಾರಿಗಳು ೯೪೮೨೯೧೫೬೮೪, ೯೧೬೪೬೯೮೯೩೮, ಗಸ್ತು ಅರಣ್ಯ ಪಾಲಕರು ೯೬೩೨೯೯೫೯೦೪, ೯೯೮೦೪೩೪೯೪೨ ಅನ್ನು ಸಂಪರ್ಕಿಸಬಹುದು ಎಂದು ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.