ಸೋಮವಾರಪೇಟೆ, ಜೂ. ೧೧ : ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನಂದಿಗುAದ ಗ್ರಾಮದ ಬಸ್ನಿಲ್ದಾಣ ಅವಸಾನದ ಅಂಚಿಗೆ ತಲುಪಿದ್ದನ್ನು ಮನಗಂಡ ಸ್ಥಳೀಯರಾದ ರಾಜು ಅವರು, ಸ್ವಂತ ಶ್ರಮದಿಂದ ಬಸ್ ನಿಲ್ದಾಣಕ್ಕೆ ಕಾಯಕಲ್ಪ ನೀಡುವ ಮೂಲಕ ಮಾದರಿಯಾಗಿದ್ದಾರೆ.
ನಂದಿಗುAದ ಗ್ರಾಮದ ಬಸ್ ನಿಲ್ದಾಣವು ನಿರ್ವಹಣೆಯ ಕೊರತೆಯಿಂದ ಶಿಥಿಲಾವಸ್ಥೆಗೆ ತಲುಪಿತ್ತು. ಮರದ ರೀಪರ್ಗಳು ಹಾಳಾಗಿ ಹೆಂಚುಗಳು ಕೆಳಗೆ ಬಿದ್ದಿದ್ದವು. ಮಹಿಳೆಯರು, ಮಕ್ಕಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ದಿನಂಪ್ರತಿ ಬಸ್ಗಾಗಿ ಕಾಯಲು ಆಶ್ರಯ ನೀಡುತ್ತಿದ್ದ ನಿಲ್ದಾಣ, ಗ್ರಾ.ಪಂ. ನಿರ್ಲಕ್ಷö್ಯಕ್ಕೆ ತುತ್ತಾಗಿ ಅವಸಾನದ ಅಂಚಿಗೆ ತಲುಪಿತ್ತು. ಇದನ್ನು ಗಮನಿಸಿದ ಸ್ಥಳೀಯರಾದ ರಾಜು ಅವರು ತಮ್ಮ ಮನೆಯಲ್ಲಿ ಉಳಿಕೆಯಾಗಿದ್ದ ಹೆಂಚು ಗಳನ್ನು ತಂದು, ರೀಪರ್ಗಳನ್ನು ಸರಿಪಡಿಸಿ ಬಸ್ ನಿಲ್ದಾಣದ ಛಾವಣಿ ದುರಸ್ತಿ ಕಾರ್ಯಕ್ಕೆ ಮುಂದಾದರು. ಇದನ್ನು ಗಮನಿಸಿದ ರಾಮನಹಳ್ಳಿ ಮಂಜು ಅವರೂ ಕೈಜೋಡಿಸಿದರು.
ನಿಲ್ದಾಣದ ಮೇಲೆ ತುಂಬಿಕೊAಡಿದ್ದ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿ, ಹೊಸ ಹೆಂಚುಗಳನ್ನು ಜೋಡಿಸುವ ಮೂಲಕ ನಿಲ್ದಾಣಕ್ಕೆ ಕಾಯಕಲ್ಪ ನೀಡಿದರು. ಈ ಸಂದರ್ಭ ಸ್ಥಳೀಯರಾದ ಗಿರೀಶ್ ಹಾಗೂ ಉತ್ತಪ್ಪ ಅವರುಗಳೂ ಸಹ ಸಹಕಾರ ನೀಡಿದರು.