ಮಡಿಕೇರಿ, ಜೂ. ೧೧: ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ, ಮಡಿಕೇರಿ ತಾಲೂಕು ಕುಂದಚೆೆÃರಿ ಗ್ರಾಮದ ದಿವ್ಯಾಂಗ, ಚರಣ್ ಕೇಕಡ ಅವರಿಗೆ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ವೈಯಕ್ತಿಕವಾಗಿ ಆಕ್ಸಿಜನ್ ಕಾನ್ಸಂಟ್ರೇಟರನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸೂರಜ್ ಹೊಸೂರು, ಕೆಡಿಪಿ ಸದಸ್ಯ ಬಾಚಮಾಂಡ ಲವ ಚಿಣ್ಣಪ್ಪ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹನೀಫ್, ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫೀಕ್, ಕಕ್ಕಬೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಪ್ರಮುಖರುಗಳಾದ ಆಪ್ರು ರವೀಂದ್ರ, ಬಾಲಚಂದ್ರ ನಾಯರ್, ಕೋಡಿರ ವಿನೋದ್, ಹ್ಯಾರೀಸ್, ಹನೀಫ್ ಇನ್ನಿತರರು ಉಪಸ್ಥಿತರಿದ್ದರು.