ಮಡಿಕೇರಿ, ಜೂ. ೧೦: ಗ್ಯಾಸ್ ಗೀಸರ್ ಬಳಕೆಯಿಂದ ಪ್ರವಾಸಿಗರೊಬ್ಬರು ಮೃತಪಟ್ಟ ಪ್ರಕರಣದ ಹಿನ್ನೆಲೆ ಪೊಲೀಸರು ನಗರದ ಹೋಂಸ್ಟೇಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸೋಮವಾರಪೇಟೆಯ ಹೋಂಸ್ಟೇ ಒಂದರ ಸ್ನಾನಗೃಹದಲ್ಲಿ ಮೈಸೂರು ಮೂಲದ ಪ್ರವಾಸಿ ಯುವತಿ ಗ್ಯಾಸ್ ಗೀಸರ್‌ನಿಂದ ವಿಷ ಅನಿಲ ಸೋರಿಕೆಯಾಗಿ ಮೃತಪಟ್ಟಿದ್ದರು. ಗ್ಯಾಸ್ ಗೀಸರ್ ಬಳಕೆ ನಿಯಮಕ್ಕೆ ವಿರುದ್ಧವಾದ ಹಿನ್ನೆಲೆ ಹೋಂಸ್ಟೇಗಳಿಗೆ ಭೇಟಿ ನೀಡಿದ ಪೊಲೀಸರು ಇದನ್ನು ಪರಿಶೀಲನೆ ನಡೆಸಿ ಮಾಹಿತಿ ನೀಡಿದರು. ನಾನಾ ಬಡಾವಣೆಗಳ ಬೀಟ್ ಪೊಲೀಸರ ಜೊತೆ ನೋಂದಾಯಿತ ಹೋಂಸ್ಟೇಗಳಿಗೆ ಭೇಟಿ ನೀಡಿದ ಪೊಲೀಸರು, ಹೋಂಸ್ಟೇಗಳಲ್ಲಿ ಗ್ಯಾಸ್ ಗೀಸರ್ ಬಳಸದಿರುವ ಕುರಿತು ಖಚಿತ ಪಡಿಸಿಕೊಂಡರು.

ಹೋಂಸ್ಟೇಗಳಲ್ಲಿ ಗ್ಯಾಸ್ ಗೀಸರ್ ಬಳಕೆ ಕಂಡುಬAದರೇ ಅಂತಹ ಹೋಂಸ್ಟೇ ಮಾಲೀಕರಿಗೆ ನೋಟಿಸ್ ನೀಡಲಾಗುವುದು ಎಂದು ಪೊಲೀಸ್ ಸಿಬ್ಬಂದಿ ತಿಳಿಸಿದರು.