*ಗೋಣಿಕೊಪ್ಪ, ಜೂ. ೧೦: ವಿಶ್ವ ತಂಬಾಕು ವಿರೋಧಿ ದಿನಾಚರಣೆಯನ್ನು ಗೋಣಿಕೊಪ್ಪ ನಗರದಲ್ಲಿ ವೀರಾಜಪೇಟೆ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಜಾಥಾ ನಡೆಸುವ ಮೂಲಕ ಜಾಗೃತಿ ಮೂಡಿಸಿದರು. ಮುಖ್ಯ ರಸ್ತೆಯ ಮೂಲಕ ಬಸ್ ನಿಲ್ದಾಣದವರೆಗೆ ಜಾಥಾ ಅಭಿಯಾನ ಕೈಗೊಂಡು ಬೀದಿ ನಾಟಕದ ಮೂಲಕ ಮನುಷ್ಯನ ಜೀವನಕ್ಕೆ ತಂಬಾಕು ಮಾರಕ ಎಂಬ ಸಂದೇಶವನ್ನು ಸಾರಿದರು. ವೀರಾಜಪೇಟೆ ತಾಲೂಕು ವೈದಾಧಿಕಾರಿ ಡಾ. ಯತಿರಾಜ್, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಸೇರಿದಂತೆ ವೈದ್ಯಕೀಯ ಕಾಲೇಜಿನ ಸಿಬ್ಬಂದಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.