ಐಗೂರು, ಜೂ. ೧೦: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ೨೦೨೫ -೨೬ನೇ ಸಾಲಿನ ಜಿಲ್ಲಾಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪ್ರಶಸ್ತಿಗೆ ಗುಡ್ಡೆಹೊಸೂರಿನ ಮಾದಾಪಟ್ಟಣ ಗ್ರಾಮದ ಪಿ.ಎಂ ಸುನಿಲ್ ಹಾಗೂ ಶ್ರುತಿ ದಂಪತಿಯ ಪುತ್ರಿ ಅತ್ತೂರಿನ ಜ್ಞಾನಗಂಗಾ ವಸತಿ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಆರ್ಯ ಪಿ.ಎಸ್ ಭಾಜನರಾಗಿದ್ದಾರೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ತೋರಿದ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸೂಪರಿಂಟೆAಡೆAಟ್ ಜಯಂತಿ ಅವರು ಆರ್ಯಳಿಗೆ ರೂ.೧೦ ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಆರ್ಯ ಪಿ.ಎಸ್ ಅವರು ಸಿದ್ದಾಪುರದ ನಾಟ್ಯಾಲಯದ ರಾಜೇಶ್ ಆಚಾರ್ಯ ಅವರ ಬಳಿ ತರಬೇತಿ ಪಡೆಯುತ್ತಿದ್ದು, ಭರತನಾಟ್ಯ ಮತ್ತು ನೃತ್ಯ ಕ್ಷೇತ್ರದಲ್ಲಿ ರಾಜ್ಯ, ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.