ಕೂಡಿಗೆ, ಜೂ. ೧೦: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರ ನೂತನ ಇಂಗ್ಲೀಷ್ ಮಾಧ್ಯಮ ಎಲ್.ಕೆ.ಜಿ, ಯುಕೆಜಿ ತರಗತಿಯನ್ನು ಆರಂಭ ಮಾಡಲಾಗಿದೆ.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಪಿ. ಧರ್ಮ ನೂತನ ತರಗತಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಬಿ. ದೇವರಾಜ್, ಶೋಭಾ ಪ್ರಕಾಶ್, ತೊರೆನೂರು ಕೃಷಿ ಪತ್ತಿನ ಸಹಕಾರ ಸಂಘ ನಿರ್ದೇಶಕ ಹೆಚ್.ಸಿ ಮೂರ್ತಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಾದೇವಿ, ಶಾಲಾಭಿವೃದ್ಧಿ ಸದಸ್ಯ ನಂಜುAಡಪ್ಪ, ಗ್ರಾಮಸ್ಥರಾದ ಪ್ರಕಾಶ್, ರವಿ, ಮಲ್ಲಿಕಾರ್ಜುನ, ಎ.ಎಸ್. ಕುಮಾರ, ಮುಖ್ಯ ಶಿಕ್ಷಕ ಪ್ರಸನ್ನ, ಹಾಗೂ ಶಿಕ್ಷಕ ವೃಂದ ಎಲ್ಲರೂ ಪಾಲ್ಗೊಂಡಿದ್ದರು.