ಐಗೂರು, ಜೂ ೧೦: ೩೧ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಅವರನ್ನು ಗುಮ್ಮನಕೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಅಜಿತ್ ಕುಮಾರ್ ಅವರು ಕ್ರೀಡಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಬಗ್ಗೆ ಶಿಕ್ಷಕ ವೃಂದದವರು ಮಾತನಾಡಿ ಶ್ಲಾಘಿಸಿದರು. ತಾಲೂಕು ದೈಹಿಕ ಶಿಕ್ಷಣದ ಪರಿವೀಕ್ಷಕಿ ಸುಕುಮಾರಿ, ಗುಮ್ಮನಕೊಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸಾಕಮ್ಮ, ಕಾಜೂರು ಶಾಲೆ ಮುಖ್ಯ ಶಿಕ್ಷಕಿ ಸರಳ ಕುಮಾರಿ, ಕೂಡಿಗೆ ಶಾಲೆಯ ಮುಖ್ಯ ಶಿಕ್ಷಕ ಯೋಗೇಶ್, ಶಿಕ್ಷಕರುಗಳಾದ ಕರುಂಬಯ್ಯ, ಸತೀಶ್ ಕುಮಾರ್, ಕೃಷ್ಣಪ್ಪ, ಮಂಜುನಾಥ್, ಭಾರತಿ, ಅನಸೂಯ ಮತ್ತು ಇಂದಿರಾ ಉಪಸ್ಥಿತರಿದ್ದರು.