ಮಡಿಕೇರಿ, ಜೂ. ೯: ಕೊಡಗು ಜಿ¯್ಲÁ ಮರಾಠ/ಮರಾಟಿ ಸಮಾಜ ಸೇವಾ ಸಂಘ ಹಾಗೂ ಅಂಭಾಭವಾನಿ ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ೩೦ನೇ ವಾರ್ಷಿಕ ಮಹಾಸಭೆ ತಾ. ೧೪ ರಂದು ತಾಳತ್ತಮನೆಯ ಸಂಘದ ಕಟ್ಟಡದಲ್ಲಿ ನಡೆಯಲಿದೆ.
ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಕೊಡಗು ಜಿ¯್ಲÁ ಮರಾಠ/ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಎA. ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯನ್ನು ಕರ್ನಾಟಕ ಮರಾಟಿ ಒಕ್ಕೂಟದ ಅಧ್ಯP್ಷÀ ಡಾ. ಕೆ. ಸುಂದರನಾಯ್ಕ್ (ಐಎಫ್ಎಸ್) ಅವರು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ರಾಷ್ಟಿçÃಯ ವೈಮಾಂತರಿP್ಷÀ ಪ್ರಯೋಗ ಶಾಲೆಯ ಮುಖ್ಯ ವಿe್ಞÁನಿ ಎಂ.ಟಿ. ಶೋಭಾವತಿ, ಉದ್ಯಮಿ ಉಮೇಶ್ ನಾಯ್ಕ್, ಸಂಘದ ಉಪಾಧ್ಯಕ್ಷೆ ದೇವಕಿ ಜಿ.ಆರ್. ನಾಯ್ಕ್, ಅಂಭಾಭವಾನಿ ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಅಧ್ಯಕ್ಷ ಎಂ.ಆರ್. ಮೋಹನ್, ಮಹಿಳಾ ವೇದಿಕೆ ಅಧ್ಯಕ್ಷೆ ರತ್ನಮಂಜರಿ ನರಸಿಂಹ, ಕಟ್ಟದ ಸಮಿತಿ ಅಧ್ಯಕ್ಷ ಎಂ.ಟಿ. ಗುರುವಪ್ಪ, ಉಪಸಮಿತಿಗಳ ಅಧ್ಯಕ್ಷ ಕೆ.ಜಿ. ಹೊನ್ನಪ್ಪ, ಧನಂಜಯ್, ವೆಂಕಪ್ಪ, ನಿರಲ್ ಕುಮಾರ್, ಕೆ.ಜೆ. ಶಶಿಕುಮಾರ್ ಇತರರು ಪಾಲ್ಗೊಳ್ಳಲಿದ್ದಾರೆ.
ಪ್ರತಿಭಾ ಪುರಸ್ಕಾರ: ೨೦೨೪-೨೫ ಮತ್ತು ೨೦೨೫-೨೬ನೇ ಸಾಲಿನಲ್ಲಿ ೭ನೇ ತರಗತಿ, ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ವೃತ್ತಿಪರ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಅರ್ಹ ವಿದ್ಯಾರ್ಥಿಗಳು ತಾ. ೧೦ರೊಳಗೆ ಅಂಕಪಟ್ಟಿಯನ್ನು ತಾಳತ್ತಮನೆ ವಿಳಾಸಕ್ಕೆ ಕಳುಹಿಸತಕ್ಕದ್ದು ಎಂದು ತಿಳಿಸಿದ್ದಾರೆ.
ಮಧ್ಯಾಹ್ನ ೧೨ ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರು ತಾ. ೧೦ ರೊಳಗೆ ರತ್ನಮಂಜರಿ ೯೪೮೧೪೬೯೨೫೦ ಸಂಖ್ಯೆಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ೯೪೪೯೮೫೫೩೪೫ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಸಮಾಜದ ಟ್ರಸ್ಟ್ ಉದ್ಘಾಟನೆ
ಮಹಾಸಭೆಯಲ್ಲಿ ಕೊಡಗು ಜಿ¯್ಲÁ ಮರಾಠ / ಮರಾಟಿ ಪರಿಶಿಷ್ಟ ಪಂಗಡ ಸಮಾಜ ಸೇವ ಟ್ರಸ್ಟ್ ಅನ್ನು ಉದ್ಘಾಟಿಸಲಾಗುತ್ತದೆ. ಮಧ್ಯಾಹ್ನ ೨ ಗಂಟೆಯಿAದ ಕರ್ನಾಟಕ ಮರಾಟಿ ಒಕ್ಕೂಟದ ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿಯ ಸಭೆ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಮರಾಟಿ ಒಕ್ಕೂಟದ ಅಧ್ಯP್ಷÀ ಸುಂದರ ನಾಯ್ಕ್ (ಐಎಫ್ಎಸ್) ವಹಿಸಲಿದ್ದಾರೆ.