ಮಡಿಕೇರಿ, ಜೂ. ೮ : ತಾ.೫ ರಂದು ತಿತಿಮತಿಯ ಕೋಣನಕಟ್ಟೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ಸಂಧ್ಯಾ ಅಚ್ಚಯ್ಯ ಅವರ ಕುಟುಂಬಸ್ಥರನ್ನು ಸಂಸದ ಯದುವೀರ್ ಒಡೆಯರ್ ಭೇಟಿ ಮಾಡಿ ಸಾಂತ್ವನ ಹೇಳಿದರು.
ಕಾಡಾನೆ ಕಾರ್ಯಾಚರಣೆ
ಸಿದ್ದಾಪುರ, ಜೂ. ೮: ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಹಾಗೂ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿರುವ ಹಾಲುಗುಂದ, ಬೈರಂಬಾಡ, ಕಣ್ಣಂಗಾಲ,ಯಡೂರು,ಪಲ್ಲಕೆರೆ, ಅಮ್ಮತ್ತಿ ಕಾರ್ಮಾಡು, ಪುಲಿಯೇರಿ, ಇಂಜಿಲಗೆರೆ, ಕರಡಿಗೋಡು, ಗ್ರಾಮಗಳ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ತಾ. ೧೦ ಮತ್ತು ೧೧ ರಂದು ಬೆಳಿಗ್ಗೆ ೮ರಿಂದ ಸಂಜೆ ೬ ರವರೆಗೆ ನಡೆಯಲಿದೆ. ಈ ಎರಡು ದಿನಗಳ ಕಾಲ ಗ್ರಾಮಸ್ಥರು, ರೈತರು ಕಾರ್ಮಿಕರು ಹಾಗೂ ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳು, ಸಾರ್ವಜನಿಕರು, ವಾಹನ ಚಾಲಕರು ಎಚ್ಚರ ವಹಿಸಬೇಕೆಂದು ಹಾಗೂ ಕಾರ್ಯಾಚರಣೆ ಸಂದರ್ಭ ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕೆಂದು ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಮ್ ಮನವಿ ಮಾಡಿದ್ದಾರೆ.