ಚೆಯ್ಯಂಡಾಣೆ, ಜೂ. ೮: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ತೋಟಕ್ಕೆ ನುಗ್ಗಿದ ಘಟನೆ ನಡೆದಿದೆ.
ವೀರಾಜಪೇಟೆ ನಾಪೋಕ್ಲು ಮುಖ್ಯ ರಸ್ತೆಯ ಚೆಯ್ಯಂಡಾಣೆಯಲ್ಲಿ ಈ ಘಟನೆ ನಡೆದಿದೆ. ಕೇರಳದ ಕಾಸರಗೋಡುವಿನಿಂದ ಚೇಲಾವರ ಜಲಪಾತ ಹಾಗೂ ಕಬ್ಬೆ ಬೆಟ್ಟ ವೀಕ್ಷಣೆಗೆ ತೆರಳುತ್ತಿದ್ದ ಪ್ರವಾಸಿಗರ ಕಾರು ಚೆಯ್ಯಂಡಾಣೆ ಪಟ್ಟಣದ ಸರ್ಕಾರಿ ಆರೋಗ್ಯ ಕೇಂದ್ರದ ವಸತಿ ಗೃಹದ ಸಮೀಪದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಸ್ವಿಫ್ಟ್ ಕಾರು ರಸ್ತೆಯ ಬದಿಯ ತೋಟಕ್ಕೆ ನುಗ್ಗಿದೆ ಅಪಘಾತದಿಂದ ಕಾರಿನ ಮುಂಭಾಗ ಜಖಂಗೊAಡಿದ್ದು ಕಾರಿನಲ್ಲಿದ್ದ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೋಟದೊಳಗಿದ್ದ ಕಾರನ್ನು ಸ್ಥಳೀಯರು ಜೀಪ್‌ಗೆ ಹಗ್ಗ ಕಟ್ಟುವ ಮೂಲಕ ಎಳೆದು ಹೊರ ತೆಗೆಯಲಾಯಿತು.