ಮಡಿಕೇರಿ, ಜೂ. ೮: ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಆರೋಪಿಗೆ ವೀರಾಜಪೇಟೆ ೨ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಂಡ ವಿಧಿಸಿದೆ.

ತಾ. ೩೦.೯.೨೦೧೯ ರಂದು ಗೋಣಿಕೊಪ್ಪ ಮಂಜುನಾಥ ಟ್ರೇಡರ್ಸ್ ನಿಂದ ೨,೦೯,೦೦೦ ಮೊತ್ತದ ಟೈಲ್ಸ್ ಖರೀದಿ ಮಾಡಿ ಅದರ ಮಾಲೀಕ ಲಕ್ಷಿö್ಮ ರೆಡ್ಡಿ ಅವರಿಗೆ ಚೆಕ್ ನೀಡಿ ಹಣ ನೀಡದಿದ್ದ ಕುಟ್ಟ ಗ್ರಾಮದ ಲೋಕೇಶ್ ಕೆ.ಜಿ. ಎಂಬವರ ವಿರುದ್ಧ ಪೊನ್ನಂಪೇಟೆ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿ ಅಲ್ಲಿನ ನ್ಯಾಯಾಧೀಶರು ಆರೋಪಿಯನ್ನು ಖುಲಾಸೆಗೊಳಿಸಿ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ವೀರಾಜಪೇಟೆ ೨ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ಹಿಂದೆ ಪೊನ್ನಂಪೇಟೆ ನ್ಯಾಯಾಲಯ ನೀಡಿದ್ದ ತೀರ್ಪುನ್ನು ರದ್ದು ಮಾಡಿ ಆರೋಪಿ ಲೋಕೇಶ್ ಅವರಿಗೆ ೩ ಲಕ್ಷ ದಂಡ ವಿಧಿಸಿದ್ದಾರೆ.

ಇದರಲ್ಲಿ ೧೦೦೦೦ ವನ್ನು ಸರಕಾರಕ್ಕೆ ಪಾವತಿ ಮಾಡುವಂತೆ ತಪ್ಪಿದಲ್ಲಿ ೬ ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ಅರ್ಜಿದಾರರ ಪರ ವಕೀಲರು, ನೋಟರಿ ಎಂ.ಟಿ. ಕಾರ್ಯಪ್ಪ ವಾದ ಮಂಡಿಸಿದರು.