ಮಡಿಕೇರಿ, ಜೂ. ೮: ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ತಾ. ೧೩ ರಂದು ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮುದಾಯದ ವಧು-ವರರ ಸಮಾವೇಶ ನಗರದ ಕೊಡಗು ಗೌಡ ಸಮಾಜ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಚೊಕ್ಕಾಡಿ ಅಪ್ಪಯ್ಯ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ ಹಲವರಿಗೆ ನಾನಾ ಕಾರಣಗಳಿಂದ ವಿವಾಹವಾಗಿಲ್ಲ. ಈ ನಿಟ್ಟಿನಲ್ಲಿ ವಧು-ವರರ ಸಮಾವೇಶವನ್ನು ನಡೆಸಲಾಗುತ್ತಿದೆ. ತಾ. ೧೩ ರ ಬೆಳಿಗ್ಗೆ ೧೦ ಗಂಟೆಗೆ ಸಮಾವೇಶ ಆರಂಭಗೊಳ್ಳಲಿದ್ದು, ಬೆಳಿಗ್ಗೆ ೯.೩೦ ರಿಂದ ನೋಂದಣಿ ಆರಂಭವಾಗಲಿದೆ. ಆಸಕ್ತ ವಧು-ವರರು ಕಡ್ಡಾಯವಾಗಿ ಸಮಾವೇಶದಲ್ಲಿ ಭಾಗವಹಿಸಬೇಕು, ವಧುವಿಗೆ ೧೮ ವರ್ಷ, ವರನಿಗೆ ೨೧ ವರ್ಷ ಮೇಲ್ಪಟ್ಟಿರಬೇಕು, ವಧುವರರು ಕಡ್ಡಾಯವಾಗಿ ಫೋಟೋ, ಜಾತಕ, ಆಧಾರ್ ಕಾರ್ಡ್, ವಿದ್ಯಾರ್ಹತೆ, ಉದ್ಯೋಗ ಮತ್ತಿತರ ಮಾಹಿತಿಗಳನ್ನು ಸಲ್ಲಿಸಬೇಕು, ಸಮಾವೇಶದಲ್ಲಿ ವಿಶೇಷ ಚೇತನರು, ವಿಧುರ, ವಿಧವೆಯರು, ಮರುವಿವಾಹ ಬಯಸುವವರು, ವಿಚ್ಛೇದಿತರು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ೯೪೪೮೮೮೪೬೭೩ ಅಥವಾ ೯೮೪೪೪೪೦೨೬೬ ಸಂಖ್ಯೆಯನ್ನು ಸಂಪರ್ಕಿಸುವAತೆ ಕೋರಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸೆಟ್ಟೆಜನ ಗಣಪತಿ, ಕಾರ್ಯದರ್ಶಿ ರತ್ನಕುಮಾರ್ ಕುಂಜಿಲನ, ಸಹ ಕಾರ್ಯದರ್ಶಿ ಕಟ್ರತನ ಲಲಿತಾ ಅಯ್ಯಣ್ಣ, ಖಜಾಂಚಿ ಕುಯ್ಯಮುಡಿ ಅಶ್ಚಿನಿ ಕುಮಾರ್, ನಿರ್ದೇಶಕ ಸೂರ್ತಲೆ ರಾಮಚಂದ್ರ ಭಾಗವಹಿಸಿದ್ದರು.