ವೀರಾಜಪೇಟೆ, ಜೂ. ೭: ವೀರಾಜಪೇಟೆಯ ಪೆರುಂಬಾಡಿ ಮುಖ್ಯ ರಸ್ತೆಯಲ್ಲಿರುವ ಕೊರಗಜ್ಜ ದೇವ ಸ್ಥಾನದ ಸಮೀಪ ಆಟೋ ಮತ್ತು ವೀರಾಜಪೇಟೆ ಪಟ್ಟಣದ ಪುರಸಭೆ ಕಸ ಸಾಗಿಸುವ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಮತ್ತೋರ್ವ ಮಹಿಳೆ ಮತ್ತು ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಆಟೋದಲ್ಲಿ ಪ್ರಯಾ ಣಿಸುತ್ತಿದ್ದ ಪೆರಂಬಾಡಿ ನಿವಾಸಿ ಸುಲೋಚನ (೫೮) ಎಂಬವರು ಗಂಭೀರ ಗಾಯಗೊಂಡು ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗುವ ವೇಳೆ ಮೃತಪಟ್ಟಿದ್ದು, ಮತ್ತೋರ್ವ ಮಹಿಳೆ ಅಮೃತ ಅವರನ್ನು ಬೆಂಗಳೂರಿನ ಅಸ್ಪತ್ರೆಗೆ ಸಾಗಿಸ ಲಾಗಿದೆ ಹಾಗೂ ಪದ್ಮನಾಭ ಎಂಬವರಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಮೈಸೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಟೋ ಚಾಲಕ ಸುರೇಶ್ ಅವರಿಗೂ ಗಂಭೀರ ಗಾಯಗಳಾಗಿದ್ದು ವೀರಾಜಪೇಟೆ ಸಾರ್ವಜನಿಕ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಪುರಸಭೆ ತ್ಯಾಜ್ಯ ಸಾಗಿಸುವ ವಾಹನವನ್ನು ವಿನೋದ್ ಚಾಲನೆ ಮಾಡುತ್ತಿದ್ದರು. ವೀರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ