ಜೂನ್ ೨೧ ವಿಶ್ವ ಯೋಗ ದಿನಾಚರಣೆ. ಯೋಗ ಸಕಲ ವ್ಯಾದಿಗಳಿಗೂ ಪರಿಹಾರೋಪಾಯ, ಮದ್ದು ಎಂಬ ಮಾತಿದೆ. ಎಲ್ಲರಿಗೂ ಅನುಕೂಲವಾಗುವಂತಹ ಯೋಗವನ್ನು ಅಭ್ಯಾಸ ಮಾಡುವುದು ಕೂಡ ಒಂದು ಕಲೆ. ಈ ಅದ್ಭುತ ಕಲೆಯನ್ನು ಕಲಿಸಿಕೊಡುವ ಯೋಗ ಶಿಕ್ಷಕರೂ ಕೂಡ ಕಲಾವಿದರೆಂದೇ ಹೇಳಬಹುದು.
ಯೋಗ ಇದೀಗ ವಿಶ್ವದಲ್ಲೇ ದೊಡ್ಡ ವಿಚಾರ. ಸಂಸ್ಕೃತಿ, ಆಚಾರ-ವಿಚಾರ-ಪದ್ಧತಿಗಳಿಗೆ ಹೆಸರುವಾಸಿಯಾಗಿರುವ ಪುಟ್ಟ ಕೊಡಗು ಕೂಡ ಯೋಗದಲ್ಲಿ ಹೆಸರು ಮಾಡುತ್ತಿದೆ. ಸಾಕಷ್ಟು ಯೋಗ ಶಿಕ್ಷಕರು, ಗುರುಗಳು ತಮ್ಮದೇ ಆದ ಸಂಸ್ಥೆ, ತರಗತಿಗಳ ಮೂಲಕ ಯೋಗ ತರಬೇತಿ ನೀಡುತ್ತಿದ್ದಾರೆ.
ಈ ಯೋಗ ಕಲೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ವರ್ಷ ‘ಶಕ್ತಿ' ಮಕ್ಕಳಿಗೆ ಸ್ಪರ್ಧೆಯನ್ನು ಏರ್ಪಡಿಸಿಕೊಂಡು ಬರುತ್ತಿದೆ. ಆದರೆ, ಈ ಬಾರಿ ಆ ಮಕ್ಕಳನ್ನು ತಯಾರಿ ಮಾಡುವ ಯೋಗ ಶಿಕ್ಷಕರಿಗೆ, ಯೋಗ ತರಬೇತಿ ಸಂಸ್ಥೆಯವರಿಗೆ ಒಂದು ಪುಟ್ಟ ಕಾಯಕವನ್ನು ನೀಡುತ್ತಿದೆ. ಯೋಗ ಶಿಕ್ಷಕರು, ಸಂಸ್ಥೆಯವರು ಯೋಗದ ಬಗ್ಗೆ ತಾವು ಕಲಿಸುತ್ತಿರುವ ಯೋಗಾಸನ ಬಗ್ಗೆ ಸಂಕ್ಷಿಪ್ತವಾಗಿ ನಮಗೆ ಬರೆದು ಕಳುಹಿಸಿ.
ಯೋಗ, ಆದರ ವಿಚಾರ, ಅದರಿಂದಾಗುವ ಪ್ರತಿಕೂಲ ಉಪಯೋಗಗಳ ಬಗ್ಗೆ ಬರೆದು ಕಳುಹಿಸಿ. ನಿಮ್ಮ ಪೂರ್ಣ ವಿಳಾಸ, ಭಾವಚಿತ್ರ, ಮಾಹಿತಿಗಳೊಂದಿಗೆ ಬರಹಗಳು ತಾ. ೧೫ ರ ಒಳಗಾಗಿ ನಮಗೆ ತಲುಪಬೇಕು. ನಿಮ್ಮ ಬರಹಗಳನ್ನು ೭೪೮೩೫೬೩೭೫೬ ಈ ವಾಟ್ಸಾö್ಯಪ್ ಸಂಖ್ಯೆಗೆ ಕಳುಹಿಸಿಕೊಡಿ.
ಜಿ. ಚಿದ್ವಿಲಾಸ್, ಸಂಪಾದಕ