ಕೂಡಿಗೆ, ಜೂ. ೫: ಶಿರಂಗಾಲದಲ್ಲಿರುವ ಹಾಸನ ಹಾಲು ಒಕ್ಕೂಟದ ವತಿಯಿಂದ ಆರಂಭಗೊAಡಿರುವ ಹಾಲು ಶೀಥಲೀಕರಣ ಕೇಂದ್ರಕ್ಕೆ ಒಕ್ಕೂಟದ ಜಿಲ್ಲಾ ನಿರ್ದೇಶಕ, ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಮುಂದಿನ ದಿನಗಳಲ್ಲಿ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲು ಉತ್ಪಾದಕರ ಸಂಘಗಳಿAದ ಹೆಚ್ಚು ಹಾಲು ಬರುವ ಹಿನ್ನೆಲೆ ಹೆಚ್ಚು ಸಾಮರ್ಥ್ಯದ ನೂತನ ಯಂತ್ರವನ್ನು ಅಳವಡಿಕೆ ಮಾಡಲು ಒಕ್ಕೂಟದ ಆಡಳಿತ ಮಂಡಳಿಯಿAದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಮಂತ್ ಕುಮಾರ್ ತಿಳಿಸಿದರು.
ಈ ಸಂದರ್ಭ ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್, ಮಾರುಕಟ್ಟೆ ಉಪ ವ್ಯವಸ್ಥಾಪಕ ಮಲ್ಲೇಶ್, ಸಹಾಯಕ ವ್ಯವಸ್ಥಾಪಕ ಸಂತೋಷ್, ಶಿರಂಗಾಲ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಎಂ.ಪಿ. ಸುರೇಶ್, ನಿರ್ದೇಶಕರುಗಳಾದ ಮನುಕುಮಾರ್, ಗಂಗಾಧರ, ವಿಷಕಂಠ, ಕುಮಾರ್, ರೈತರು ಹಾಜರಿದ್ದರು.