ಮಡಿಕೇರಿ, ಜೂ.೫: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ೨೦೨೬-೨೭ನೆ ಸಾಲಿನಲ್ಲಿ ‘ಚಿಗುರು’ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವ ಶಾಸ್ತಿçÃಯ ಸಂಗೀತ, ಕರ್ನಾಟಕ, ಹಿಂದೂಸ್ಥಾನಿ, ಗಾಯನ ವಾದ್ಯ ಸಂಗೀತ, ಸುಗಮ ಸಂಗೀತ, ವಚನ ಸಂಗೀತ, ಜನಪದ ಗೀತೆಗಳು, ಸಮೂಹ ನೃತ್ಯ, ನೃತ್ಯ ರೂಪಕ, ನಾಟಕ, ಯಕ್ಷಗಾನ, ಮೂಡಲಪಾಯ, ಬಯಲಾಟ, ಗೊಂಬೆಮೇಳ ಹಾಗೂ ಏಕಾಪಾತ್ರಾಭಿನಯ ಇತರೆ ಕಲೆಗಳಲ್ಲಿ ಪರಿಣತಿ ಹೊಂದಿರುವ ಕಲಾವಿದರಾಗಿದ್ದು, ೮ ರಿಂದ ೧೪ ವರ್ಷದ ವಯೋಮಾನದ ಪ್ರತಿಭಾವಂತ ಮಕ್ಕಳು ಭಾಗವಹಿಸಬಹುದು.
ಈ ಮಕ್ಕಳು ವಯಸ್ಸಿನ ದೃಢೀಕರಣ ಪತ್ರ ಹಾಗೂ ಪ್ರದರ್ಶಿಸಲಿರುವ ಕಲೆಯ ವಿವರವನ್ನು ಪಾಸ್ ಪೋರ್ಟ್ ಸೈಜ್ ಭಾವಚಿತ್ರದೊಂದಿಗೆ ವಯಸ್ಸಿನ ದೃಢೀಕರಣದೊಂದಿಗೆ ಶಾಲಾ ಮುಖ್ಯಸ್ಥರಿಂದ ದೃಢೀಕರಿಸಿ ಕಲೆಗೆ ಸಂಬAಧಿಸಿದAತೆ, ವಿವರವಾದ ಮಾಹಿತಿಯ ಅರ್ಜಿಯನ್ನು ಜೂನ್.೩೦ ರೊಳಗೆ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಭವನ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿಗೆ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.