ಸೋಮವಾರಪೇಟೆ, ಜೂ. ೫: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ತಾ. ೨೧ ರಂದು ‘ಆರೋಗ್ಯಕರ ವೃದ್ದಾಪ್ಯಕ್ಕಾಗಿ ಯೋಗ’ ಎಂಬ ಧ್ಯೇಯ ವಾಕ್ಯದಡಿ ಅಂತರರಾಷ್ಟಿçÃಯ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಶಿಕ್ಷಕಿ ರಾಗಿಣಿ ತಿಳಿಸಿದ್ದಾರೆ. ಪಟ್ಟಣದ ಕ್ಲಬ್ ರಸ್ತೆಯ ಮಧುಕೃಪಾ ಕಟ್ಟಡದಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ತಾ. ೨೧ ರಂದು ಬೆಳಿಗ್ಗೆ ೬.೩೦ ರಿಂದ ೮.೩೦ ರವರೆಗೆ ಯೋಗ ದಿನಾಚರಣೆ ನಡೆಯಲಿದೆ.

ಈ ಪ್ರಯುಕ್ತ ತಾ. ೮ ರಿಂದ ಪ್ರತಿದಿನ ಸಂಜೆ ೫.೩೦ ರಿಂದ ೬.೩೦ರವರೆಗೆ ಆರ್ಟ್ ಆಫ್ ಲಿವಿಂಗ್ ಸೆಂಟರ್‌ನಲ್ಲಿ ಉಚಿತ ಯೋಗಾಭ್ಯಾಸ ನಡೆಯಲಿದೆ. ಆಸಕ್ತರು ಯೋಗಾಭ್ಯಾಸದಲ್ಲಿ ಭಾಗವಹಿಸಬಹುದು ಎಂದು ರಾಗಿಣಿ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ:೯೯೪೫೯೮೭೭೧೭ ಸಂಪರ್ಕಿಸಬಹುದಾಗಿದೆ.