ಕೂಡಿಗೆ, ಜೂ ೫: ಕುಶಾಲನಗರ ವಲಯ, ಅತ್ತೂರು ಶಾಖೆ ವ್ಯಾಪ್ತಿಯ ಅಂದಗೋವೆ ಗ್ರಾಮದಲ್ಲಿ ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟುವ ಕಾರ್ಯಚರಣೆ ತಾ.೭ ರಂದು(ನಾಳೆ) ಹಮ್ಮಿಕೊಳ್ಳಲಾಗಿದೆ.
ತೋಟದ ಮಾಲೀಕರು, ಕಾರ್ಮಿಕರು, ಶಾಲಾ ಮಕ್ಕಳು, ಸಾರ್ವಜನಿಕನಿಕರು ಎಚ್ಚರಿಕೆಯಿಂದ ಇದ್ದು ಆನೆ ಕಾಡಿಗೆ ಅಟ್ಟುವ ಕಾರ್ಯಾಚರಣೆಗೆ ಸಹಕಾರ ನೀಡಬೇಕಾಗಿ ಕುಶಾಲನಗರ ವಲಯ ಅರಣ್ಯ ಅಧಿಕಾರಿ ಆರ್ ರಕ್ಷಿತ್ ಮನವಿ ಮಾಡಿದ್ದಾರೆ.