*ಗೋಣಿಕೊಪ್ಪ, ಜೂ. ೫: ಹದಿನೈದು ವಿವಿಧ ತಳಿಯ ಮಾವುಗಳ ಮೇಳ ಮಾವು ಪ್ರಿಯರನ್ನು ಆಕರ್ಷಿಸಿತು. ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಹಳೆಯ ಕಟ್ಟಡದಲ್ಲಿ ಕೊಡಗು ಹಾಪ್‌ಕಾಮ್ಸ್ ವತಿಯಿಂದ ಆಯೋಜಿಸಿದ ಪ್ರಥಮ ವರ್ಷದ ಮಾವು ಮೇಳ ಭರ್ಜರಿ ಪ್ರದರ್ಶನ ಮತ್ತು ಮಾರಾಟದೊಂದಿಗೆ ಮಾವು ಪ್ರಿಯರ ಗಮನ ಸೆಳೆಯಿತು.

ಕನಕಪುರ ಭಾಗದ ರೈತರು ತಾವೇ ಬೆಳೆದ ತಾಜಾ ಹಣ್ಣುಗಳ ಮಾರಾಟ ಮತ್ತು ಮೇಳÀ ಆಕರ್ಷಣೀಯವಾಗಿತ್ತು. ಬಾದಾಮಿ, ರಸಪುರಿ, ಮಲ್ಲಿಕಾ, ಅಮ್ರಪಾಲಿ, ಇಮಾಮ್ ಪಸಂದ್, ಅಲ್ಪೂನ್ಸೋ, ಕೇಸರ್ ಮಾವು, ದಶೇರಿ ಮಾವು, ಮಲ್ಲರ್, ಮಾಲ್ಗೋವಾ, ಸಿಂದೂರ, ರಸಪುರಿ, ತೋತಪುರಿ, ಕಾಲಾಪಾಡಿ, ಸಕ್ಕರೆಗುತ್ತಿ, ರಾಮನಿ, ಮಿಠಾಯಿ ಮಾವು ಎಂಬAತಹ ಜನಪ್ರಿಯ ತಳಿಗಳ ಜತೆಗೆ ಹಲವು ಅಪರೂಪದ ಮಾವಿನ ಹಣ್ಣುಗಳು ಮಾವು ಪ್ರಿಯರನು ಆಕರ್ಷಿಸಿತು.

ಶುಕ್ರವಾರದಿಂದ ಭಾನುವಾರದ ತನಕ ಮೂರು ದಿನಗಳು ನಡೆಯುವ ಮಾವು ಮೇಳಕ್ಕೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಚಾಲನೆ ನೀಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿಲನ್ ಗಣಪತಿ, ಗ್ರಾ.ಪಂ. ಸದಸ್ಯೆ ಚೈತ್ರಾ ಬಿ. ಚೇತನ್, ಹಾಪ್‌ಕಾಮ್ಸ್ ಕೊಡಗು ಜಿಲ್ಲಾ ಅಧ್ಯಕ್ಷ ಬಿದ್ದಾಟಂಡ ಎ. ರಮೇಶ್ ಚಂಗಪ್ಪ, ನಿರ್ದೇಶಕ ಮಾಚಿಮಂಡ ಸುವಿನ್ ಗಣಪತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇಷ್ಮ ಗಿರೀಶ್, ವ್ಯವಸ್ಥಾಪಕ ಸಾಗರ್ ಹಾಗೂ ರೈತ ಮಂಜು ಸೇರಿದಂತೆ ರಾಮನಗರದ ರೈತರು, ಹಾಪ್‌ಕಾಮ್ಸ್ ಸಿಬ್ಬಂದಿಗಳು ಇದ್ದರು.