ಪಾಲಿಬೆಟ್ಟ, ಜೂ. ೪: ಚೆನ್ನಯ್ಯನಕೋಟೆಯ ಸಹರಾ ಯೂತ್ ಕ್ಲಬ್‌ನ ಸದಸ್ಯರುಗಳು ಚೆನ್ನಯ್ಯನಕೋಟೆ ಭಾಗದ ವಿವಿಧ ಸರಕಾರಿ ಶಾಲೆಗಳಿಗೆ ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ಹಂಚಿದರು.

ಚೆನ್ನಯ್ಯನಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪ್ರೌಢಶಾಲೆ, ಚೆನ್ನಂಗಿ ಸರ್ಕಾರಿ ಪ್ರಾಥಮಿಕ ಶಾಲೆ, ಗುಡ್ಲೂರು ಸರ್ಕಾರಿ ಶಾಲೆ, ಹುಂಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ವಿತರಿಸಿದರು.

ಸಹರಾ ಯೂತ್ ಕ್ಲಬ್‌ನ ಅಧ್ಯಕ್ಷ ಕೆ.ಎಂ. ರತೀಶ್ ಕುಮಾರ್ ಮಾತನಾಡಿ, ಈ ಬಾರಿ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಪೆನ್ನುಗಳನ್ನು ಹಂಚಿರುತ್ತೇವೆ. ಮುಂದಿನ ದಿನಗಳಲ್ಲಿ ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಕ್ಲಬ್ ತೀರ್ಮಾನಿಸಿದೆ ಎಂದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷರಾದ ಜಯಲಕ್ಷಿö್ಮ, ಉಪಾಧ್ಯಕ್ಷ ಎಂ.ಎನ್ ವಿಜು, ಸರ್ಕಾರಿ ವೈದ್ಯಾಧಿಕಾರಿ ಶಿವಪ್ಪ ಗೋಟ್ಯಾಲ್, ಸಹರಾ ಯೂತ್ ಕ್ಲಬ್‌ನ ಉಪಾಧ್ಯಕ್ಷ ಸಿರಾಜ್, ಖಜಾಂಚಿ ವಿನುಕುಮಾರ್, ಮಾಜಿ ಅಧ್ಯಕ್ಷರಾದ ಪ್ರಮೋದ್, ನಿರ್ದೇಶಕರಾದ ಆಶಿಕ್ ಅಚ್ಚು ಉಪಸ್ಥಿತರಿದ್ದರು.