ಕೊಡಗು ಜಿಲ್ಲೆಯು ತನ್ನ ಹವಾಮಾನ ಮತ್ತು ಭೌಗೋಳಿಕ ಪರಿಸರದಿಂದಾಗಿ ಕ್ರೀಡಾ ತರಬೇತಿಗೆ ಅತ್ಯಂತ ಸೂಕ್ತವಾದ ಪ್ರದೇಶವಾಗಿದೆ. ಈ ಮಣ್ಣಿನಿಂದ ಮೂಡಿಬಂದ ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಬಹುತೇಕ ಎಲ್ಲಾ ಕ್ರೀಡೆಗಳಲ್ಲಿ ಕೊಡಗಿನ ಕ್ರೀಡಾಪಟುಗಳು ಸಾಧನೆ ತೋರಿದ್ದಾರೆ.
ಒಲಿಂಪಿಯನ್ಸ್ಗಳ ಸಂಖ್ಯೆ
ಕೊಡಗು ಈವರೆಗೆ ಒಟ್ಟು ೧೯ ಒಲಿಂಪಿಯನ್ಸ್ಗಳನ್ನು ದೇಶಕ್ಕೆ ನೀಡಿದೆ. ಇದರಲ್ಲಿ ಹಾಕಿ ಕ್ರೀಡೆಯಲ್ಲಿ ೧೧ ಮಂದಿ ಮತ್ತು ಇತರ ಕ್ರೀಡೆಗಳಲ್ಲಿ ೮ ಮಂದಿ ಸೇರಿದ್ದಾರೆ. ವಿಶು ಕುಟ್ಟಪ್ಪ ಇವರು ಬಾಕ್ಸಿಂಗ್ ತರಬೇತುದಾರರಾಗಿ ೧೯ನೇ ಒಲಿಂಪಿಯನ್ ಆಗಿ ಸೇರ್ಪಡೆಯಾಗಿದ್ದಾರೆ.
ಹಾಕಿ ಕ್ರೀಡೆಯಲ್ಲಿ ಒಟ್ಟು ೧೧ ಒಲಂಪಿಕ್ಸ್ ಆಟಗಾರರಿದ್ದು ಎಂ.ಪಿ. ಗಣೇಶ್, ಬಿ.ಪಿ. ಗೋವಿಂದ, ಎಂ.ಎA. ಸೋಮಯ್ಯ, ಬಿ.ಕೆ. ಸುಬ್ರಮಣಿ, ಸಿ.ಎಸ್. ಪೂಣಚ್ಚ, ಎ.ಬಿ. ಸುಬ್ಬಯ್ಯ, ನಿಕಿನ್ ತಿಮ್ಮಯ್ಯ, ಎಸ್.ಕೆ. ಉತ್ತಪ್ಪ, ವಿ.ಆರ್. ರಘುನಾಥ್, ಎಸ್.ವಿ. ಸುನಿಲ್ ಮತ್ತು ಅರ್ಜುನ್ ಹಾಲಪ್ಪ ಸೇರಿದ್ದಾರೆ.
ಇನ್ನು ಇತರ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಅಶ್ವಿನಿ ನಾಚಪ್ಪ, ಅಶ್ವಿನಿ ಪೊನ್ನಪ್ಪ, ಎಂ.ಆರ್. ಪೂವಮ್ಮ, ಸಿ.ಸಿ. ಮಾಚಯ್ಯ, ರೋಹನ್ ಬೋಪಣ್ಣ, ಜಿ.ಜಿ. ಪ್ರಮೀಳಾ, ಸೈಲಿಂಗ್ನಲ್ಲಿ ಗಣಪತಿ ಮತ್ತು ಬಾಕ್ಸಿಂಗ್ನಲ್ಲಿ ವಿಶು ಕುಟ್ಟಪ್ಪ ಇದ್ದಾರೆ.
ಕೊಡಗು ಇದುವರೆಗೆ ೧೯ ಒಲಿಂಪಿಯನ್ಸ್, ೧೦೦ಕ್ಕೂ ಹೆಚ್ಚು ಅಂತರರಾಷ್ಟಿçÃಯ ಆಟಗಾರರು ಮತ್ತು ಆರ್ಮಿ (ಸೈನ್ಯ) ಸೇರಿದಂತೆ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ೨೦೦ಕ್ಕೂ ಹೆಚ್ಚು ರಾಷ್ಟಿçÃಯ ಆಟಗಾರರನ್ನು ದೇಶಕ್ಕೆ ನೀಡಿದ ಪುಣ್ಯಭೂಮಿಯಾಗಿರುವುದು ಹೆಮ್ಮೆ ಎನಿಸುತ್ತದೆ.
ಐತಿಹಾಸಿಕ ಸಾಧನೆ: ೫೦ ವರ್ಷಗಳ ಹಿಂದೆ ಮೊದಲ ಬಾರಿಗೆ ಭಾರತ ವಿಶ್ವಕಪ್ ಹಾಕಿ ಗೆದ್ದಾಗ, ಕೊಡಗಿನ ಬಿ.ಪಿ. ಗೋವಿಂದ ಮತ್ತು ಪೈಕೆರ ಕಾಳಯ್ಯ ಅವರು ತಂಡವನ್ನು ಪ್ರತಿನಿಧಿಸಿದ್ದರು.
ವೈವಿಧ್ಯಮಯ ಕ್ರೀಡೆಗಳು: ಹಾಕಿ ಹೊರತುಪಡಿಸಿ ಶಟಲ್ ಬ್ಯಾಡ್ಮಿಂಟನ್ (ಉದಾ: ದಿಯಾ), ಸ್ಕಾ÷್ವ್ವಷ್ನ ವಿಶ್ವ ಚಾಂಪಿಯನ್ ಜೋಶ್ನಾ ಚಿಣ್ಣಪ್ಪ ಮತ್ತು ಒಲಿಂಪಿಕ್ಸ್ನಲ್ಲಿ ಸೈಲಿಂಗ್ ಪ್ರತಿನಿಧಿಸಿದ ಕೇಳಪಂಡ ಗಣಪತಿ ಅವರಂತಹ ಅನೇಕ ಸಾಧಕರಿದ್ದಾರೆ.
ಪದ್ಮಶ್ರೀ ಪುರಸ್ಕೃತರು
ರಾಷ್ಟçದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪುರಸ್ಕೃತರಾದ ಡಾ. ಮೊಳ್ಳೆರ ಪಿ. ಗಣೇಶ್, ಕುಟ್ಟಂಡ ಜೋಶ್ನ ಚಿಣ್ಣಪ್ಪ ಹಾಗೂ ಮಚ್ಚಂಡ ರೋಹನ್ ಬೋಪಣ್ಣ ಕೊಡಗಿಗೆ ಕೀರ್ತಿ ತಂದಿದ್ದಾರೆ. ಇದಷ್ಟೇ ಅಲ್ಲದೆ ಅರ್ಜುನ ಪ್ರಶಸ್ತಿ ದ್ರೋಣಾಚಾರ್ಯ ಪ್ರಶಸ್ತಿ ಹಾಗೂ ಜೀವಮಾನ ಸಾಧಕ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ ಪಡೆದಂತ ಹಲವು ಕ್ರೀಡಾಪಟುಗಳು ಕೊಡಗಿನಲ್ಲಿದ್ದಾರೆ.
ಮೂಲಸೌಕರ್ಯ ಮತ್ತು ಸರ್ಕಾರದ ಅಗತ್ಯತೆಗಳು
ಜಿಲ್ಲೆಯ ಕ್ರೀಡಾ ಪ್ರತಿಭೆಗಳನ್ನು ಬೆಳೆಸಲು ಈ ಕೆಳಗಿನ ಸೌಲಭ್ಯಗಳ ತುರ್ತು ಅಗತ್ಯವಿದೆ.
ಕ್ರೀಡಾಂಗಣಗಳು: ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಮತ್ತು ಹಾಕಿ ಕ್ರೀಡೆಗೆ ಅಂತರರಾಷ್ಟಿçÃಯ ಮಟ್ಟದ *ಸಿಂಥೆಟಿಕ್ ಟರ್ಫ್ (ಂsಣಡಿoಖಿuಡಿಜಿ) ವ್ಯವಸ್ಥೆಗಳಾಗಬೇಕು.
ಸರ್ಕಾರಿ ಶಾಲೆಗಳ ಬಲವರ್ಧನೆ: ಸರ್ಕಾರಿ ಶಾಲೆಗಳನ್ನು ಕ್ರೀಡಾ ದೃಷ್ಟಿಯಿಂದ ಮೇಲ್ದರ್ಜೆಗೇರಿಸಬೇಕು ಮತ್ತು ತಳಮಟ್ಟದಿಂದಲೇ ಅಂದರೆ ಪ್ರತಿ ಹಳ್ಳಿಗಳಲ್ಲಿ ಕ್ರೀಡಾ ಪ್ರೋತ್ಸಾಹ ನೀಡಬೇಕು.
ಕ್ರೀಡಾ ಸಾಮಗ್ರಿ: ಆರ್ಥಿಕವಾಗಿ ಹಿಂದುಳಿದಿರುವ ಆದರೆ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸರ್ಕಾರದಿಂದ ಕ್ರೀಡಾ ಸಾಮಗ್ರಿಗಳನ್ನು ಒದಗಿಸಿ ಪ್ರೋತ್ಸಾಹಿಸಬೇಕು.
ತರಬೇತಿ ಕೇಂದ್ರಗಳು: ಸಾಯಿ (SಂI) ಮತ್ತು ಡಿವೈಎಸ್ಎಸ್ (ಆಙSS) ನಂತಹ ಸಂಸ್ಥೆಗಳು ಜಿಲ್ಲೆಯ ಪ್ರತಿಭೆಗಳನ್ನು ಕೇಂದ್ರೀಕರಿಸಬೇಕು.
ಹಾಕಿಯಲ್ಲಿ ಆಲ್ ಇಂಡಿಯಾ ಪಂದ್ಯಾವಳಿ ಹಾಗೂ ಫೋರ್ ನೇಷನ್ ಅಂತರರಾಷ್ಟಿçÃಯ ಪಂದ್ಯಾವಳಿ ಕೊಡಗಿನಲ್ಲಿ ನಡೆಯಬೇಕು ಅಂದರೆ ಮಾತ್ರ ಕೊಡಗಿನ ಹಾಕಿಗೆ ಭವಿಷ್ಯವಿದೆ.
ಮಾಸ್ಟರ್ಸ್ ಕಪ್ (veಣeಡಿಟಿ)
ಎಲ್ಲಾ ಕ್ರೀಡೆಗಳನ್ನು ಜೀವಂತವಾಗಿರಿಸಲು ಮಾಸ್ಟರ್ಸ್ ಕಪ್ ನಂತಹ ಪಂದ್ಯಾವಳಿಗಳನ್ನು ಪುರುಷರು, ಮಹಿಳೆಯರು ಹಾಗೂ ಕಿರಿಯ ಬಾಲಕರಿಗೆ ಪ್ರತಿ ವರ್ಷವೂ ಆಯೋಜಿಸಬೇಕು.
ಸೇನಾ ನೇಮಕಾತಿ ಮತ್ತು ಉದ್ಯೋಗಾವಕಾಶ
ನೇಮಕಾತಿ ಶಿಬಿರ: ಕೊಡಗಿನ ಯುವಕರಿಗೆ ದೇಶ ಸೇವೆಯಲ್ಲಿ ಹೆಚ್ಚಿನ ಆಸಕ್ತಿ ಇರುವುದರಿಂದ, ಜಿಲ್ಲೆಯಲ್ಲಿ ಪ್ರತಿ ವರ್ಷವೂ ತಪ್ಪದೇ ಸೇನಾ ನೇಮಕಾತಿ ಶಿಬಿರವನ್ನು ನಡೆಸಬೇಕು. ಇದನ್ನು ಒಂದು ಪ್ರಮುಖ ಗುರಿಯಾಗಿ ಪರಿಗಣಿಸಿ, ಕೊಡಗಿನ ಯುವಜನತೆಗೆ ಭಾರತೀಯ ಸೇನೆಯಲ್ಲಿ ಹೆಚ್ಚಿನ ಅವಕಾಶ ಸಿಗುವಂತಾಗಬೇಕು.
ಕೌಟುAಬಿಕ ಹಾಕಿ ಮತ್ತು ಸಮುದಾಯ ಪ್ರೋತ್ಸಾಹ
ಕೊಡಗಿನ ಕೌಟುಂಬಿಕ ಹಾಕಿ ಪಂದ್ಯಾವಳಿಗಳು ಈಗಾಗಲೇ ಗಿನ್ನಿಸ್, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ವಿಶ್ವ ದಾಖಲೆ ಹಾಗೂ ಲಿಮ್ಕಾ ದಾಖಲೆಗಳನ್ನು ನಿರ್ಮಿಸಿವೆ. ಕ್ರೀಡೆಯು ಎಲ್ಲಾ ಮಕ್ಕಳಿಗೆ ತಲುಪುವಂತಾಗಬೇಕು.
ಕೊಡಗು ಜಿಲ್ಲೆಯು ಕರ್ನಾಟಕ ರಾಜ್ಯದಲ್ಲಿಯೇ ಅತಿ ಹೆಚ್ಚು ಒಲಿಂಪಿಯನ್ಸ್ಗಳನ್ನು ನೀಡಿದ ಹೆಗ್ಗಳಿಕೆಯನ್ನು ಹೊಂದಿದ್ದು, ಇಲ್ಲಿನ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಬೇಕು.
ಕೊಡುಗೆ ಏನು
ಕೊಡಗಿನಲ್ಲಿ ೧೯ ಒಲಂಪಿಕ್ಸ್ ಆಟಗಾರರು, ಅಂತರರಾಷ್ಟಿçÃಯ ಹಾಗೂ ರಾಷ್ಟಿçÃಯ ಆಟಗಾರರಿದ್ದು ಇವರು ಕೊಡಗಿಗೆ ಏನು ಕೊಡುಗೆ ನೀಡಿದ್ದಾರೆ ಎಂಬುದು ಒಂದು ಮಹತ್ವವಾದ ಪ್ರಶ್ನೆ. ಅವರಂತೆ ಯುವ ಪೀಳಿಗೆಯನ್ನು ಕೂಡ ತಳಮಟ್ಟದಿಂದ ಮೇಲೆ ತರುವ ಕೆಲಸಕ್ಕೆ ಇವರಿಂದಲೂ ಪ್ರೋತ್ಸಾಹ ಬೇಕಾಗಿದೆ.
ಕೊಡಗನ್ನು ಕ್ರೀಡಾ ಜಿಲ್ಲೆ ಎಂದು ಘೋಷಣೆ ಮಾಡಬೇಕು
ಕೊಡಗು ಪುಟ್ಟ ಜಿಲ್ಲೆಯಾಗಿದ್ದರೂ ಕೂಡ ಹಲವು ಒಲಂಪಿಯನ್ಗಳನ್ನು ದೇಶಕ್ಕೆ ಕೊಟ್ಟಿದೆ. ಆದ್ದರಿಂದ ಕೊಡಗನ್ನು ಕ್ರೀಡಾ ಜಿಲ್ಲೆ ಎಂದು ಘೋಷಿಸಲು ಪರಿಗಣಿಸಬೇಕು. ಯಾವ ಕ್ರೀಡೆಯಲ್ಲಾಗಲಿ ಸರಿ ಅಂತರರಾಷ್ಟಿçÃಯ ಆಟಗಾರರು ಕಿರಿಯ ಆಟಗಾರರನ್ನು ಮುಖ್ಯ ವಾಹಿನಿಗೆ ತರಲು ಶ್ರಮಿಸಬೇಕು. ಇದಕ್ಕಾಗಿ ಅವರವರ ಊರಿನಲ್ಲಿ ಬೇಸಿಗೆ ಶಿಬಿರಗಳನ್ನು ಆಯೋಜಿಸಬೇಕು. ವೀರಾಜಪೇಟೆಯಲ್ಲಿರುವ ಬ್ಯಾಡ್ಮಿಂಟನ್ ಒಳಾಂಗಣ ಸ್ಟೇಡಿಯಂ, ೧೯೭೫ರ ವಿಶ್ವಕಪ್ ವಿಜೇತರು ಆಡಿದಂತಹ ಮ್ಯಾನ್ಸ್ ಕಾಂಪೌAಡ್ನ ಮೈದಾನವನ್ನು ಉಳಿಸಬೇಕಾಗಿದ್ದು ನಮ್ಮ ಆದ್ಯತೆಯಾಗಿರಬೇಕು.
ಕೊಡಗಿನ ಜಿಲ್ಲಾಧಿಕಾರಿಗಳು, ಕೊಡಗಿನ ಇಬ್ಬರು ಶಾಸಕರು, ಸಂಸದರು ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಮುತುವರ್ಜಿ ವಹಿಸಿ ಕೊಡಗನ್ನು "sಠಿoಡಿಣs hub" ಆಗಿ ಪರಿಗಣಿಸುವಂತೆ ಪ್ರಸ್ತಾವನೆ ಸಲ್ಲಿಸಬೇಕು. ಇದು ಇಂದಿನ ಕಾಲಘಟ್ಟದಲ್ಲಿ ಬಹು ಅವಶ್ಯವಾಗಿದೆ. ಇದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ.
-ಚೆಪ್ಪುಡಿರ ಕಾರ್ಯಪ್ಪ,
ಗುಹ್ಯ, ಮೊ. ೯೯೦೦೩೬೯೨೧೨