ಕುಶಾಲನಗರ, ಜೂ. ೪: ಕುಶಾಲನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ ಘಟಕದ ಉದ್ಘಾಟನೆ ಮುಂದೂಡಲ್ಪಡುತ್ತಿದೆ. ಸುಮಾರು ರೂ. ೮ ಕೋಟಿ ವೆಚ್ಚದಲ್ಲಿ ಕುಶಾಲನಗರ ಮಡಿಕೇರಿ ಹೆದ್ದಾರಿಯ ಬಸವನಹಳ್ಳಿ ಬಳಿ ಬಹುತೇಕ ಕಾಮಗಾರಿ ಪೂರ್ಣಗೊಂಡಿರುವ ಸಾರಿಗೆ ಸಂಸ್ಥೆಯ ನೂತನ ಘಟಕದ ಉದ್ಘಾಟನೆಗೆ ಕಳೆದ ಎರಡು ತಿಂಗಳಿನಿAದ ಮುಹೂರ್ತ ನಿಗದಿಯಾಗುತ್ತಿದ್ದು, ಇದೀಗ ಈ ತಿಂಗಳ ೧೩ ರಂದು ನೂತನ ಘಟಕದ ಲೋಕಾರ್ಪಣೆಗೆ ಗ್ರೀನ್ ಸಿಗ್ನಲ್ ಲಭಿಸಿತ್ತು. ಆದರೆ ರಾಜ್ಯ ಸರ್ಕಾರದ ರಾಜಕೀಯ ಬೆಳವಣಿಗೆಯ ನಡುವೆ ಮತ್ತೆ ಉದ್ಘಾಟನಾ ದಿನಾಂಕ ಮುಂದೂಡಲ್ಪಟ್ಟಿದೆ. ನೂತನ ಸಾರಿಗೆ ಸಚಿವರ ನೇಮPದÀ ನಂತರವಷ್ಟೇ ಘಟಕಕ್ಕೆ ಉದ್ಘಾಟನೆ ಭಾಗ್ಯ ದೊರಕಲಿದೆ.

ನೂತನ ಘಟಕದ ಕಾಮಗಾರಿಯನ್ನು ಕ್ಷೇತ್ರದ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ನಡುವೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಕೂಡ ಇತ್ತೀಚೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡಿದ್ದರು.

ಘಟಕದ ಶೇ. ೯೫ ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ಅಗತ್ಯವಿರುವ ಡೀಸೆಲ್ ಬಂಕ್‌ಗೆ ಮಾತ್ರ ಸಂಬAಧಿಸಿದ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಲಭ್ಯವಾಗಬೇಕಾಗಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಘಟಕದಲ್ಲಿ ನಿರ್ಮಾಣಗೊಳ್ಳಲಿರುವ ಇವಿ ಚಾರ್ಜರ್ ಘಟಕ ಕಾಮಗಾರಿ ಇನ್ನಷ್ಟೇ ನಡೆಯಬೇಕಿದೆ.

- ಚಂದ್ರಮೋಹನ್