ಕೂಡಿಗೆ, ಜೂ. ೪: ಕೂಡ್ಲೂರು ಬಸವೇಶ್ವರ ದೇವಾಲಯ ಸಮಿತಿ ವತಿಯಿಂದ ಶ್ರದ್ಧಾಭಕ್ತಿಯಿಂದ ಗ್ರಾಮ ದೇವತೆ ಮಾರಮ್ಮ ದೇವಿಯ ಪೂಜೋತ್ಸವವು ನೆರವೇರಿತು.

ಇದರ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ನೆರೆದಿದ್ದ ಗ್ರಾಮಸ್ಥರಿಗೆ, ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಈ ಸಂದರ್ಭ ಗ್ರಾಮದ ಅಧ್ಯಕ್ಷ ಜವರೇಗೌಡ, ಕಾರ್ಯದರ್ಶಿ ಪವನ್ ಕುಮಾರ್, ಪ್ರಮುಖರಾದ ಮಂಜುನಾಥ್ ಕುಮಾರ್, ವೀರಪ್ಪ, ವಿಶ್ವ, ಕವನ್, ಸೋಮು, ರಾಘವೇಂದ್ರ ಸೇರಿದಂತೆ ಸಮಿತಿ ನಿರ್ದೇಶಕರು, ಪದಾಧಿಕಾರಿಗಳು, ನೂರಾರು ಭಕ್ತರು ಹಾಜರಿದ್ದರು.