ಕುಶಾಲನಗರ, ಜೂ.೪: ಇಲ್ಲಿನ ಪಟ್ಟಣ ವ್ಯಾಪ್ತಿಯ ಗೋಮಾಳದ ಜಾಗಕ್ಕೆ ಸಂಬAಧಿಸಿದ ವಿಷಯವಾಗಿ ರಾಜ್ಯ ಉಚ್ಚ ನ್ಯಾಯಾಲಯ(ಭೂ ಕಬಳಿಕೆಯ ವಿಶೇಷ ನ್ಯಾಯಲಯ)ದ ಆzದೇಶದನ್ವಯ ವಿಭಾಗೀಯ ಸರ್ವೆ ಇಲಾಖೆಗೆ ಸೂಚನೆ ಮೇರೆಗೆ ಜಂಟಿ ಸರ್ವೆ ಕಾರ್ಯ ನಡೆಯಿತು. ಕುಶಾಲನಗರಕ್ಕೆ ಹೊಂದಿಕೊAಡಿರುವ ಬೈಚನಹಳ್ಳಿ ಮತ್ತು ಮುಳ್ಳುಸೋಗೆ ಗ್ರಾಮಗಳ ಗೋಮಾಳದ ಸರ್ವೆ ನಂಬರ್ ೨/೧ರ ವಿಚಾರವಾಗಿ ಗ್ರಾಮಗಳ ಗಡಿ ಗುರುತಿಸುವಿಕೆಯ ಪರಿಶೀಲನಾ ವರದಿಯನ್ನು ಸಂಬAಧಿಸಿದ ಇಲಾಖೆಗೆ ನೀಡುವ ವಿಷಯವಾಗಿ ಅಧಿಕಾರಿಗಳ ಸಮ್ಮುಖದಲ್ಲಿ ಸರ್ವೆ ನಡೆಯಿತು. ತಾಲೂಕು ಸರ್ವೆಯರ್ ಪರಮೇಶ್ ಸೇರಿದಂತೆ ಸಿಬ್ಬಂದಿ ವರ್ಗ ಸರ್ವೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.