ವಿಶ್ಲೇಷಣೆ : ಅನಿಲ್ ಎಚ್.ಟಿ.

ಡಿ.ಕೆ. ಶಿವಕುಮಾರ್ ಎಂಬ ಹೆಸರಿನವನಾದ ನಾನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ…ಎಂದು ಹೇಳುವಲ್ಲಿಂದ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಹೊಸ ಘಟ್ಟ ಪ್ರಾರಂಭವಾಗಿದೆ. ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದ್ದ ವಚನದಂತೆ ಕೊನೆಗೂ ಮುಖ್ಯಮಂತ್ರಿ ಸ್ಥಾನವನ್ನು ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ತಾನು ಮಾತಿಗೆ ತಪ್ಪುವುದಿಲ್ಲ ಎಂಬುದನ್ನು ನಿರೂಪಿಸುವ ಪ್ರಯತ್ನ ಮಾಡಿದೆ. ಅಷ್ಟೇ ಅಲ್ಲ ಕಾಂಗ್ರೆಸ್ ಪಕ್ಷಕ್ಕಾಗಿ ತಳಮಟ್ಟದಿಂದ ದುಡಿದ ಕಾರ್ಯಕರ್ತನೋರ್ವ ಈ ಪಕ್ಷಕ್ಕೆ ತೋರಿದ ನಿಷ್ಟೆಯಿಂದಾಗಿಯೇ ಇಂದು ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಗಿಟ್ಟಿಸಿದ್ದಾರೆ ಎಂಬ ಸಂದೇಶವನ್ನೂ ಸಾರುವಲ್ಲಿ ಯಶಸ್ವಿಯಾಗಿದ್ದಾರೆ.

ಡಿ.ಕೆ. ಶಿವಕುಮಾರ್ ಕಾರ್ಯಕರ್ತರ ನಾಯಕ. ರಾಜಕೀಯ ಜೀವನಕ್ಕಿಂತ ಮೊದಲು ಕೂಡ ತಳಮಟ್ಟದ ಜನರೊಂದಿಗೆ ಬೆರೆಯುತ್ತಾ ಹಂತಹAತವಾಗಿ ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡ ನಾಯಕ. ೨೭ ವರ್ಷದಲ್ಲಿಯೇ ಶಾಸಕನಾಗುವ ಮೂಲಕ ರಾಜ್ಯದ ಅತೀ ಕಿರಿಯ ಶಾಸಕ ಎಂಬ ಹೆಗ್ಗಳಿಕೆಗೆ ಶಿವಕುಮಾರ್ ಪಾತ್ರರಾಗಿದ್ದರು. ರಾಜಕೀಯ ಹಾದಿಯಲ್ಲಿಯೂ ಶಿವಕುಮಾರ್ ಅನೇಕ ಅಚ್ಚರಿಗಳಿಗೆ ಕಾರಣರಾದರು. ರಾಮನಗರದಲ್ಲಿ ರಾಜಕೀಯ ಮುತ್ಸದಿ ಹೆಚ್.ಡಿ. ದೇವೇಗೌಡರ ವಿರುದ್ದ ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲು ಸೋಲು ಕಂಡರಾದರೂ ಹಠಬಿಡದೇ ಮತ್ತೊಂದು ಚುನಾವಣೆಯಲ್ಲಿಯೂ ಗೌಡರ ವಿರುದ್ದ ಸ್ಪರ್ಧಿಸಿ ಗೆಲವು ಕಂಡರು. ತಾನು ಯಾವ ಗುರಿ ಹೊಂದಿದ್ದೇನೆಯೋ ಅದನ್ನು ಸಾಧಿಸುವ ಛಲ ಮತ್ತು ಹಠ ಶಿವಕುಮಾರ್‌ಗೆ ಸಿದ್ದಿಸಿದೆ. ಹೀಗಾಗಿಯೇ ಎರಡೂವರೆ ವರ್ಷಗಳಾದರೂ ಮುಖ್ಯಮಂತ್ರಿ ಸ್ಥಾನ ಕೊಟ್ಟ ಮಾತಿನಂತೆ ತನಗೆ ಸಿಕ್ಕದೇ ಇದ್ದಾಗ, ಬಾಗಿಲು ಗುದ್ದಿಯಾದರೂ ಅಧಿಕಾರ ಪಡೆಯುತ್ತೇನೆ ಎಂಬ ಡೈಲಾಗ್ ಹೇಳಿದ್ದು, ದುಡಿದ ಕೂಲಿ ಕೇಳುತ್ತಿದ್ದೇನೆ ಎಂದು ಹೇಳುತ್ತಾ ಸಾಗಿದ್ದು.. ಅನೇಕ ವಚನಗಳು, ಸಂಸ್ಕೃತ ಶ್ಲೋಕಗಳ ಮೂಲಕ ಅತ್ಯಂತ ತಾಳ್ಮೆಯಿಂದಲೇ ತನಗೆ ನ್ಯಾಯಯುತವಾಗಿ ದಕ್ಕಬೇಕಾದ ಸಿ.ಎಂ. ಹುದ್ದೆಯನ್ನು ನೀಡಲೇಬೇಕೆಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸುತ್ತಲೇ ಬಂದದ್ದು. ಎಲ್ಲವೂ ಡಿ.ಕೆ. ಶಿವಕುಮಾರ್ ತಾಳ್ಮೆಯಿಂದಲೇ ವರ್ತಿಸುತ್ತಾ ಗಳಿಸಬೇಕಾದ ಸಿ.ಎಂ. ಹುದ್ದೆಯನ್ನು ೬ ತಿಂಗಳ ಬಳಿಕವಾದರೂ ಪಡೆದುಕೊಂಡದ್ದಕ್ಕೆ ಸಾಕ್ಷಿಯಂತಿದೆ.

ಗಮನಿಸಿ ನೋಡಿ, ಜೆಡಿಎಸ್‌ನಿಂದ ಉಚ್ಚಾಟನೆಯಾಗಿ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅವರು ಬಂದಾಗಿನಿAದಲೂ ಅಂದರೆ ಸರಿಸುಮಾರು ೨೦ ವರ್ಷಗಳಿಂದಲೂ ಇಲ್ಲಿಯ ತನಕ ಕಾಂಗ್ರೆಸ್‌ನ ಪ್ರಭಾವಿಗಳಾದ ಮಲ್ಲಿಕಾರ್ಜುನ ಖರ್ಗೆ, ಡಾ. ಜಿ ಪರಮೇಶ್ವರ ಸೇರಿದಂತೆ ಅನೇಕರಿಗೆ ಸಿದ್ದರಾಮಯ್ಯ ಅವರಿಂದ ಅಧಿಕಾರ ಕೇಳಿದರೂ ಅದನ್ನು ಏನೇ ಮಾಡಿದರೂ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಖರ್ಗೆ ದೆಹಲಿ ಕಡೆ ಹೊರಟರೆ ಪರಮೇಶ್ವರ್ ೨೦೧೮ರಲ್ಲಿ ಚುನಾವಣೆ ಸೋತು ಪದವಿ ಕಳೆದುಕೊಂಡರು. ಆದರೆ ಅಂತಿಮವಾಗಿ ಅಹಿಂದ ನಾಯಕ ಸಿದ್ದರಾಮಯ್ಯ ಎನ್ನುವ ಮಾಸ್ ಲೀಡರ್ ಅವರನ್ನು ತನ್ನ ರಾಜಕೀಯ ನಡೆಯಿಂದಲೇ ಎದುರಿಸಿದ್ದು-ಗಳಿಸಿದ್ದು ಡಿಕೆ ಶಿವಕುಮಾರ್ ಎನ್ನುವ ಕನಕಪುರದ ಬಂಡೆ ಮಾತ್ರ.!

ಹಣ ಇದೆ, ಆಸ್ತಿ ಇದೆ, ಅಂತಸ್ತು ಬೇಕಾದಷ್ಟಿದೆ. ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಉಪಮುಖ್ಯಮಂತ್ರಿ ಸ್ಥಾನ, ೪ನಾಲ್ಕನೇ ಪುಟಕ್ಕೆ

ಪುಟಕ್ಕೆ

(ಮೊದಲ ಪುಟದಿಂದ) ಪ್ರಭಾವವಿರುವ ಖಾತೆಯ ಸ್ಥಾನವಿದೆ. ನಾನು ಯಾಕೆ ಸುಮ್ಮನೆ ಸಿಎಂ ಕುರ್ಚಿಗೆ ಗುದ್ದಾಟ ಮಾಡಲಿ ಎಂದು ಒಂದೇ ಒಂದು ಕ್ಷಣ ಮೈಮರೆತಿದ್ದರೂ ಇಂದು ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಬಿಡದ ಹಠ ಸೋಲದ ಛಲ, ತನ್ನ ಆತ್ಮಕ್ಕೆ ತಾನೇ ಬಲ.. ತಾನೆ ಎಡ ಎಂಬAತೆ ಶಾಂತಿಮAತ್ರ ಜಪಿಸುತ್ತಲೇ ಮೌನವಾಗಿಯೇ ಹೋರಾಡಿ ಸಿದ್ದರಾಮಯ್ಯರಿಗೆ ನೀಡುವ ಗೌರವ ನೀಡುತ್ತಾ, ಟೀಕೆ ಎದುರಿಸುತ್ತಾ, ಸವಾಲು ಬೇದಿಸುತ್ತಾ ಸಿದ್ದರಾಮಯ್ಯ ಅವರಿಂದ ಅಧಿಕಾರವನ್ನು ಬಹಳ ನಾಜೂಕಾಗಿ ಆಗಿ ಪಡೆದಿದ್ದನ್ನು ಬೆಣ್ಣೆ ಒಳಗಿಂದ ಕೂದಲು ತೆಗೆದಂತೆ ಎನ್ನಬಹುದು. !

ಕಳೆದ ಚುನಾವಣೆಯಲ್ಲಿ ರಾಜ್ಯವ್ಯಾಪಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವಲ್ಲಿ ಸಿದ್ದರಾಮಯ್ಯ ಜತೆಗೂಡಿ ಶಿವಕುಮಾರ್ ರೂಪಿಸಿದ ರಾಜಕೀಯ ರಣತಂತ್ರದಿAದಾಗಿಯೇ ರಾಜ್ಯದಲ್ಲಿ ಬೇರೆ ಯಾರೂ ಊಹಿಸದ ಆದರೆ, ಶಿವಕುಮಾರ್ ಒಬ್ಬರೇ ನಿಖರವಾಗಿ ಭವಿಷ್ಯ ನುಡಿದಿದ್ದ ೧೩೬ ಶಾಸಕ ಸ್ಥಾನಗಳು ಕಾಂಗ್ರೆಸ್ ಪಾಲಿಗೆ ದಕ್ಕಿದ್ದವು. ಶಿವಕುಮಾರ್ ತಂತ್ರಗಾರಿಕೆಗೆ ಹೈಕಮಾಂಡ್ ಮೆಚ್ಚುಗೆಯೊಂದಿಗೆ ಅಚ್ಚರಿಯನ್ನೂ ತಾಳಿತ್ತು. ವಿಶೇಷವಾಗಿ ಸೋನಿಯಾ ಮತ್ತು ಪ್ರಿಯಾಂಕಾ ಗಾಂಧಿಗೆ ನಿಕಟವರ್ತಿಯಾಗಿರುವ ಶಿವಕುಮಾರ್ ಭವಿಷ್ಯದಲ್ಲಿಯೂ ಕರ್ನಾಟಕ ಮಾತ್ರವಲ್ಲ ದಕ್ಷಿಣ ಭಾರತದಲ್ಲಿಯೇ ಕಾಂಗ್ರೆಸ್ ಪಾಲಿಗೆ ಅತ್ಯಮೂಲ್ಯ ರಾಜಕೀಯ ಆಸ್ತಿ ಎಂಬುದನ್ನು ಈ ಅಮ್ಮ - ಮಗಳು ಊಹಿಸಿದ್ದರು. ಹೀಗಾಗಿಯೇ ಶಿವಕುಮಾರ್ ಬೆಂಬಲಕ್ಕೆ ನಿಂತ ಸೋನಿಯಾ - ಪ್ರಿಯಾಂಕ, ಈ ಹಂತದಲ್ಲಿ ಸಿದ್ದರಾಮಯ್ಯ ಅವರಿಗೆ ಖಡಕ್ ಆಗಿ ಸಿಎಂ ಹುದ್ದೆ ಬಿಡುವಂತೆ ಸೂಚಿಸಿದ್ದರು.

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ಸಿದ್ದರಾಮಯ್ಯ ಅವರಿಂದ ಹೊಸ ಸರ್ಕಾರಕ್ಕೆ ಯಾವುದೇ ಸಮಸ್ಯೆಯಾಗಬಾರದು ಎಂದು ಹೈಕಮಾಂಡ್ ಬುದ್ದಿವಂತಿಕೆಯ ನಿರ್ಧಾರ ಎಂಬAತೆ ಸಿದ್ದರಾಮಯ್ಯ ಅವರಿಗೆ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿದೆ. ಅರ್ಥಾತ್, ನೀವಿನ್ನು ರಾಷ್ಟಿçÃಯ ಮಟ್ಟದಲ್ಲಿ ವ್ಯವಹರಿಸಿ, ರಾಜ್ಯಕ್ಕೆ ಸಾಕು. ಅಲ್ಲೇನಿದ್ದರೂ ಡಿ.ಕೆ. ಮತ್ತು ಪರಿವಾರಕ್ಕೆ ಅವಕಾಶ ನೀಡಿ ಎಂಬ ಸಂದೇಶವನ್ನು ನೀಡಿದೆ. ಸರ್ಕಾರಿ ಜಾಹೀರಾತುಗಳಲ್ಲಿ, ಬಸ್ ಹಿಂಬದಿಯ ಪೋಸ್ಟರ್‌ಗಳಲ್ಲಿ, ಗ್ಯಾರಂಟಿ ಯೋಜನೆಗಳ ಫೋಟೋಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಈವರೆಗೂ ರಾರಾಜಿಸುತ್ತಿದ್ದ ಸಿಎಂ. ಸಿದ್ದರಾಮಯ್ಯ ಫೋಟೋ ತೆಗೆದಷ್ಟೇ ವೇಗವಾಗಿ ಕಾಂಗ್ರೆಸ್ ಹೈಕಮಾಂಡ್ ಕೂಡ ಸಿದ್ದರಾಮಯ್ಯ ಅವರನ್ನು ತಣ್ಣಗೆ ಮಾಡಿ ಶಿವಕುಮಾರ್‌ಗೆ ಹಾದಿ ಮಾಡಿಕೊಟ್ಟಂತಿದೆ.

ಮುಖ್ಯಮAತ್ರಿಯಾಗಿ ಡಿ.ಕೆ. ಶಿವಕುಮಾರ್ ಮುಂದಿರುವ ಸವಾಲುಗಳೇನು?

ತಕ್ಷಣಕ್ಕೆ ಸಚಿವ ಸಂಪುಟ ವಿಸ್ತರಣೆಯೇ ಅತೀ ದೊಡ್ಡ ಸವಾಲು. ಈಗ ಸಂಪುಟಕ್ಕೆ ಸೇರ್ಪಡೆಯಾಗಿರುವ ಸಚಿವರಿಗೆ ಪ್ರಬಲ ಖಾತೆ ನೀಡಲೇಬೇಕು. ಜತೆಗೆ ಉಳಿದ ಶಾಸಕರಿಗೂ ಎರಡನೇ ಹಂತದಲ್ಲಿ ಅಂದರೆ ಜೂನ್ ೨೦ರ ನಂತರ ಸಚಿವ ಸ್ಥಾನ ನೀಡಬೇಕು. ಸಮಯಾವಕಾಶ ಇರುವ ಹಿನ್ನಲೆಯಲ್ಲಿ ಮಂದಿನ ದಿನಗಳಲ್ಲಿ ಆಕಾಂಕ್ಷಿಗಳ ಪ್ರಭಾವ ಹೆಚ್ಚುತ್ತಲೇ ಹೋಗುವ ಆತಂಕ ಕೂಡ ಇದ್ದೇ ಇದೆ. ರಾಜ್ಯಸಭೆ ಮತ್ತು ವಿಧಾನಪರಿಷತ್‌ಗೆ ಖಾಲಿಯಿರುವ ಶಾಸಕ ಸ್ಥಾನಗಳಿಗೆ ಇನ್ನೇನು ಚುನಾವಣೆ ನಡೆಯಲಿದೆ. ಅಲ್ಲಿ ಪಕ್ಷದ ಸದಸ್ಯರನ್ನು ಸಲೀಸಾಗಿ ಗೆಲ್ಲಿಸಿಕೊಂಡು ಬರಬೇಕು.

ಸಚಿವ ಸ್ಥಾನ ದೊರಕದೇ ಇರುವ ಶಾಸಕರು ಖಂಡಿತಾ ರೆಬೆಲ್ ಆಗುತ್ತಾರೆ. ಅಂಥವರನ್ನು ಸಮಾಧಾನಗೊಳಿಸಬೇಕು. ಮುಂದಿನ ದಿನಗಳಲ್ಲಿ ೩ ವರ್ಷಗಳ ಕಾಲ ನೇಮಕವಾಗದೇ ಉಳಿದಿರುವ ನಿಗಮ, ಮಂಡಳಿಗಳಿಗೆ ೨೪ ತಿಂಗಳಿಗೆ ಅಧ್ಯಕ್ಷ, ಸದಸ್ಯರ ನೇಮಕ ಮಾಡಬೇಕು. ಜತೆಗೇ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸುವಂತೆ ರಾಜ್ಯದ ಮುಖ್ಯಮಂತ್ರಿಯಾಗಿ ಶಿವಕುಮಾರ್ ಪಾತ್ರ ಬಹಳ ಮಹತ್ವದ್ದು, ಕಾಂಗ್ರೆಸ್ ಸೋತಲ್ಲಿ ಅದರ ಹೊಣೆ ಮುಖ್ಯಮಂತ್ರಿಯೇ ಹೊರಬೇಕು.

ಮುಖ್ಯಮಂತ್ರಿಯಾಗಿ ಸ್ವಲ್ಪ ಎಡವಿದರೂ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್‌ಗಳಿಗಿಂತ ಹೆಚ್ಚಾಗಿ ಕಾಂಗ್ರೆಸ್ ಒಳಗಿನ ಹಿತಶತ್ರುಗಳಿಂದಲೇ ಟೀಕೆ, ಆರೋಪ ಎದುರಿಸಬೇಕಾಗುತ್ತದೆ.

೨೪ ತಿಂಗಳು ಬಾಕಿಯಿದೆ ಎಂಬುದು ಹೆಸರಿಗೆ ಮಾತ್ರ ಕೊನೇ ೪ ತಿಂಗಳೊಳಗಾಗಿ ವಿಧಾನಸಭೆಗೆ ಚುನಾವಣೆ ಎದುರಾಗಲಿದೆ. ಹೀಗಾಗಿ ಇರುವ ಕೇವಲ ೨೦ ತಿಂಗಳಲ್ಲಿಯೇ ಅತ್ಯುತ್ತಮ ಆಡಳಿತವನ್ನು ನೀಡಿ, ಕಳೆದುಹೋಗಿರುವ ಬ್ರಾö್ಯಂಡ್ ಬೆಂಗಳೂರು ಇಮೇಜ್ ಅನ್ನು ಮತ್ತೆ ಕಲ್ಪಿಸಿ, ರಾಜ್ಯವ್ಯಾಪಿ ಹದಗೆಟ್ಟಿರುವ ಆಡಳಿತಕ್ಕೆ ಕಾಯಕಲ್ಪ ನೀಡಲೇಬೇಕು. ಗ್ಯಾರಂಟಿ ಯೋಜನೆಗಳನ್ನೂ ನಷ್ಟವಾಗದಂತೆ ಆರ್ಥಿಕವಾಗಿ ಸರ್ಕಸ್ ಮಾಡುತ್ತಲೇ ಮುಂದಕ್ಕೆ ಕೊಂಡೊಯ್ಯಬೇಕು. ಇವೆಲ್ಲದರ ಜತೆಗೇ ಶಿವಕುಮಾರ್ ಸರ್ಕಾರದ್ದು ಎಂಬ ಹೊಸ ಯೋಜನೆಗಳನ್ನು, ವಿನೂತನವಾಗಿ ರಾಜ್ಯದ ಜನತೆಗೆ ನೀಡಬೇಕು. ಹೈಕಮಾಂಡ್ ಪ್ರಮುಖರನ್ನು ಸದಾ ಒಲೈಸುತ್ತಲೇ ಇರಬೇಕು. ಇವೆಲ್ಲದರ ಜತೆಗೇ ೨೪ ತಿಂಗಳಲ್ಲಿ ಬರುವ ವಿಧಾನಸಭಾ ಚುನಾವಣೆಗೂ ಸಜ್ಜಾಗಬೇಕು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಈಗಿನಿಂದಲೇ ರಣತಂತ್ರ ರೂಪಿಸಬೇಕು. ಡಿ.ಕೆ. ಶಿವಕುಮಾರ್ ಆದ ನಾನು ಎಂದು ಹೇಳಿಕೊಂಡು ಪ್ರತಿಜ್ಞಾ ವಿಧಿ ಸ್ವೀಕರಿಸುವುದರ ಜತೆಗೇ ಇಷ್ಟೆಲ್ಲಾ ಹೊಣೆಗಾರಿಕೆಯ ದೊಡ್ಡ ಬಂಡೆಯನ್ನೂ ಕನಕಪುರದ ರಾಜಕೀಯದ ಬಂಡೆ ಹೊರಬೇಕಾದ ಅನಿವಾರ್ಯತೆ ಇದೆ.! ದಿ.ದೇವರಾಜ್ ಅರಸು ಜನಪರ ಚಿಂತನೆಯಿAದ ಮುಖ್ಯಮಂತ್ರಿ ಪದವಿ ಪಡೆದರು. ರಾಮಕೃಷ್ಣ ಹೆಗಡೆ ನಾಯಕತ್ವ ಗುಣದಿಂದ ಮುಖ್ಯಮಂತ್ರಿಯಾದರೆ, ಹೆಚ್.ಡಿ. ದೇವೆಗೌಡರು ಸ್ವಂತ ಶಕ್ತಿಯಿಂದ ದೇಶದ ಪ್ರಧಾನಿಯಾದರು. ಬಿ.ಎಸ್. ಯಡಿಯೂರಪ್ಪ ರೈತ ಹೋರಾಟದಿಂದ ಹಸಿರು ಶಾಲು ಹೊದ್ದು ಮುಖ್ಯಮಂತ್ರಿಯಾದರು. ಎಸ್.ಎಂ.ಕೃಷ್ಣ ರಾಜಕೀಯ ಮುತ್ಸದಿ, ಕ್ರಿಯಾಶೀಲ ಗುಣದಿಂದ ಸಿಎಂ ಆದವರು. ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ದನಿಯಾಗಿ ಸಿಎಂ ಸ್ಥಾನ ಪಡೆದವರು. ಬಂಗಾರಪ್ಪ ಅವರು ಜನಸಮಾನ್ಯರೊಂದಿಗೆ ಬೆರೆಯುತ್ತಾ ಸಿಎಂ ಪಟ್ಟ ಗಿಟ್ಟಿಸಿಕೊಂಡವರು. ತನ್ನ ಗುರುವಾಗಿದ್ದ ಬಂಗಾರಪ್ಪ ಅವರಂತೆ ಸಂಘಟನಾ ಶಕ್ತಿಯಿಂದ ಈಗ ಡಿಕೆ ಶಿವಕುಮಾರ್ ಕೂಡ ಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೆಸ್‌ಗಾಗಿ ೩೦ ವರ್ಷಗಳ ಕಾಲ ಬೆವರು ಸುರಿಸಿದ್ದಕ್ಕಾಗಿ ಸಿಕ್ಕಬೇಕಾದ ಕೂಲಿ ಕೊನೆಗೂ ಸಿಕ್ಕಿದೆ, ತಟ್ಟಿದ ಬಾಗಿಲು ತೆರೆದಿದೆ; ಯಾವುದೇ ಬಾಗಿಲಿಗೂ ಹಾನಿಯಾಗದೇ!!!

ಇತರ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಶಿವಕುಮಾರ್ ಪಾಲಿಗೆ ದೊಡ್ಡ ಸವಾಲೇ ಇದೆ. ಅಂಥ ಸವಾಲುಗಳನ್ನು ಸ್ವತ ಕ್ರಿಕೆಟ್ ಪ್ರೇಮಿಯಾಗಿರುವ ಶಿವಕುಮಾರ್ ಟಿ ೨೦ ಮ್ಯಾಚ್‌ನಲ್ಲಿ ಪವರ್ ಪ್ಲೇ ಬಳಸಿ, ತೀಕ್ಷ್ಮ ಹೊಡೆತಗಳನ್ನು ಪ್ರತೀ ಚೆಂಡಿಗೂ ಸಿಕ್ಸರ್ ಬಾರಿಸುವಂತೆ ಉಳಿದ ೨೦ ತಿಂಗಳಲ್ಲಿ ಎಲ್ಲರ ಸಮನ್ವಯದಿಂದ ಆಡಲೇಬೇಕಾಗಿದೆ. ಡಿಕೆ ಪಾಲಿಗೆ ಮುಖ್ಯಮಂತ್ರಿ ಸ್ಥಾನ ಹೊಸತ್ತಾಗಿದೆಯೇ ವಿನಾ ರಾಜ್ಯದ ಪಾಲಿಗೆ ಇರುವ ಆಡಳಿತ ಪಕ್ಷದ್ದೇ ಸರ್ಕಾರದ ಮುಂದುವರಿದ ಭಾಗ ಇದಾಗಲಿದೆ. ಕಂಪ್ಯೂಟರ್ ರೀಬೂಟ್ ಮಾಡಿದಂತೆ ಸಾಕಷ್ಟು ಬದಲಾವಣೆಗಳೊಂದಿಗೆ ಕಾಂಗ್ರೆಸ್ ೨ನೇ ಭಾಗದಲ್ಲಿ ಮುಂದುವರೆಯಲಿದೆ. ಈ ಭಾಗದಲ್ಲಿ ಆಡಳಿತ ಹೇಗಿತ್ತು ಎಂಬುದನ್ನು ೨೦೨೮ ರಲ್ಲಿ ಮತದಾರರ ತೀರ್ಪು ನಿರ್ಧರಿಸಲಿದೆ. ಆ ಚಾಲೆಂಜ್ ಕೂಡ ಡಿ.ಕೆ. ಮೇಲಿದೆ.