*ಗೋಣಿಕೊಪ್ಪ, ಜೂ. ೩: ಕೊಡಗು ಜಿಲ್ಲೆಯನ್ನು ನಾಶಪಡಿಸುವ ಅಭಿವೃದ್ಧಿ ಯೋಜನೆ ಅವಶ್ಯವಿಲ್ಲ ಎಂದು ಕೊಡಗು ವನ್ಯಜೀವಿ ಸಂರಕ್ಷಣಾ ಸಂಘದ ಅಧ್ಯಕ್ಷ ಕುಂಞAಗಡ ಬೋಸ್ ಮಾದಪ್ಪ ಆಗ್ರಹಿಸಿದ್ದಾರೆ.
ಕಡಮಕಲ್ - ಸುಬ್ರಹ್ಮಣ್ಯ ರಸ್ತೆ, ರೈಲ್ವೇ ಯೋಜನೆ ಹಾಗೂ ಕಾನೂನು ಬಾಹಿರ ಭೂಪರಿವರ್ತನೆ ಮತ್ತು ಪ್ರವಾಸೋಧ್ಯಮದಿಂದ ನಡೆಯುತ್ತಿರುವ ಪರಿಸರ ನಾಶವನ್ನು ಸಂಘ ಸಂಪೂರ್ಣವಾಗಿ ವಿರೋಧಿಸುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಈ ಹಿಂದೆ ಸದನದ ಕಲಾಪದಲ್ಲಿ ಕಡಮಕಲ್ಲು- ಸುಬ್ರಹ್ಮಣ್ಯ ರಸ್ತೆಯ ಪ್ರಸ್ತಾಪವನ್ನು ಮಂಡಿಸಿ ಅನುಮೋದನೆ ಹಾಗೂ ಹಣ ಬಿಡುಗಡೆಗೊಳಿಸಲು ಮನವಿ ಸಲ್ಲಿಸಿ ಸದನದ ಗಮನ ಸೆಳೆದಿರುವುದು ತಿಳಿದಿರುವ ವಿಚಾರ; ಕೊಡಗು ಭೌಗೋಳಿಕವಾಗಿ ಸುಂದರವಾಗಿರುವ ಪುಟ್ಟ ಕೊಡಗು ಜಿಲ್ಲೆ. ಈಗಾಗಲೇ ಅಭಿವೃದ್ಧಿಯ ಹೊಡೆತ, ಪ್ರಾಕೃತಿಕ ವಿಕೋಪ, ಮಾನವ-ಪ್ರಾಣಿ ಸಂಘರ್ಷ ಹಾಗೂ ಹವಾಮಾನ ವೈಪರೀತ್ಯ ಮತ್ತು ಲಂಗುಲಗಾಮಿಲ್ಲದ ಪ್ರವಾಸೋದ್ಯಮದಿಂದ ನಲುಗಿ ಹೋಗಿರುವುದರಿಂದ ಭೂನಾಶ ಮತ್ತು ಪ್ರಕೃತಿ ನಾಶಕ್ಕೆ ಕಾರಣವಾಗಿದೆ ಎಂಬ ಅರಿವು ಮುಖ್ಯ ಎಂದರು. ವನ್ಯಜೀವಿಧಾಮದಲ್ಲಿ ರಸ್ತೆ ನಿರ್ಮಾಣ ಮಾಡಲು ಕಾನೂನಿನಡಿಯಲ್ಲಿ ಅವಕಾಶವಿಲ್ಲದಿದ್ದರೂ ಕೂಡ ಇಂತಹ ವಿಷಯವನ್ನು ಸದನ ದಲ್ಲಿ ಪ್ರಸ್ತಾಪಿಸಿ ಜನರ ದಾರಿ ತಪ್ಪಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ೨೦೧೮ ರಲ್ಲಿ ಎದುರಾದ ಪ್ರಕೃತಿ ವಿಕೋಪದಿಂದ ಇನ್ನೂ ಚೇತರಿಸಿಕೊಳ್ಳದ ಕೊಡಗಿನ ಅತ್ಯಂತ ಶಿಥಿಲ ಭೌಗೋಳಿಕ ರಚನೆಯ ಪುಷ್ಪಗಿರಿಯಂತ ಬೆಟ್ಟ ಶ್ರೇಣಿಯನ್ನು ಕೊರೆದು ರಸ್ತೆ ನಿರ್ಮಿಸಿದಲ್ಲಿ ಪುನಃ ಪ್ರಕೃತಿ ವಿಕೋಪಕ್ಕೆ ಅಹ್ವಾನ ನೀಡಿದಂತಾಗುತ್ತದೆ. ಶಾಸಕರು ಪ್ರಕೃತಿ ನಾಶದಂತ ಅಭಿವೃದ್ಧಿ ಯೋಜನೆಯನ್ನು ಕೈಬಿಟ್ಟು ಬೇರೆ ರೀತಿಯ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಸಂಸದ ಯದುವೀರ್ ಒಡೆಯರ್ ಕೇಂದ್ರ ರೈಲ್ವೇ ಸಚಿವರೊಂದಿಗೆ ಕೊಡಗಿಗೆ ರೈಲ್ವೇ ಹಾದಿಯ ಬಗ್ಗೆ ಚರ್ಚಿಸಿರುವುದನ್ನು ಬಹಿರಂಗಪಡಿಸಿದ್ದರು. ಕೊಡಗಿಗೆ ರೈಲ್ವೆಯಂತಹ ಯಾವುದೇ ಯೋಜನೆಯು ರೈಲ್ವೇ ಇಲಾಖೆಯ ಪ್ರಸ್ತಾಪದಲ್ಲಿ ಇಲ್ಲ ಎಂಬ ಹೇಳಿಕೆ ಮೂಲಕ ಸ್ಪಷ್ಟಪಡಿಸಿ, ಕೊಡಗಿನ ಜನತೆ ಹಾಗೂ ಪರಿಸರ ಪ್ರೀಯರ ಮನಸ್ಸಿನಲ್ಲಿದ್ದ ತಳಮಳವನ್ನು ಸ್ಪಷ್ಟಗೊಳಿಸಿದ್ದಾರೆ ಎಂದರು.
ಪ್ರವಾಸೋದ್ಯಮವನ್ನು ಕೊಡಗು ವನ್ಯಜೀವಿ ಸಂಘ ಎಂದಿಗೂ ವಿರೋಧಿಸುವುದಿಲ್ಲ. ಆದರೆ ೫ ರಿಂದ ೬ ಲಕ್ಷ ಜನಸಂಖ್ಯೆ ಇರುವ ಕೊಡಗಿಗೆ ವರ್ಷಂಪ್ರತಿ ೪೦ ರಿಂದ ೫೦ ಲಕ್ಷ ಪ್ರವಾಸಿಗರು ಆಗಮಿಸುವುದರಿಂದ ಇಲ್ಲಿನ ಸೂಕ್ಷö್ಮ ಪ್ರಕೃತಿ ತಡೆದುಕೊಳ್ಳುತ್ತಿಲ್ಲ. ಯಾವುದೇ ಪ್ರವಾಸಿ ತಾಣಗಳು ಸ್ವಚ್ಛ ಹಾಗೂ ಸುರಕ್ಷಿತವಾಗಿಲ್ಲ ಹಾಗೂ ಯಾವುದೇ ಮೂಲಭೂತ ಸೌಕರ್ಯ ಹೊಂದಿಲ್ಲ. ಅರಣ್ಯದ ಮಧ್ಯೆ ಇರುವ ಇರ್ಪು ಫಾಲ್ಸ್ನಲ್ಲಿ ಪ್ರವಾಸಿಗರು ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಬಿಸಾಕಿ ಕಸದ ಬುಟ್ಟಿಯಂತೆ ಮಾರ್ಪಾಡಾಗಿದೆ. ಸ್ವಚ್ಛತೆ ಹೆಸರಿನಲ್ಲಿ ಹಣ ಸಂಗ್ರಹಿಸುವವರು ಹಣ ಸಂಗ್ರಹಿಸುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಜಿಲ್ಲಾಡಳಿತ ಮೊದಲು ಮೂಲ ಸೌಕರ್ಯ ಹಾಗೂ ತ್ಯಾಜ್ಯ ನಿರ್ವಹಣೆಯಂತಹ ಮೂಲಭೂತ ಸೌಕರ್ಯವನ್ನು ಒದಗಿಸಿ ನಂತರ ಪ್ರವಾಸೋದ್ಯಮಕ್ಕೆ ಕೆಂಪು ಹಾಸು ಹಾಕುವುದು ಉತ್ತಮ. ನಮ್ಮ ಪಕ್ಕದ ನೆರೆ ರಾಜ್ಯದ ಊಟಿಯಂತಹ ಪ್ರವಾಸಿ ತಾಣದಲ್ಲಿ ಇರುವಂತೆ ಪ್ಲಾಸ್ಟಿಕ್ ನಿರ್ವಹಣೆ ಹಾಗೂ ಗ್ರೀನ್ ಪಾಸ್ ಮೂಲಕ ನಿಯಂತ್ರಿತ ಪ್ರವಾಸೋದ್ಯಮದಿಂದ ಕೊಡಗನ್ನು ಸಂರಕ್ಷಿಸುವುದು ಒಳ್ಳೆಯದು ಎಂದು ಹೇಳಿದರು.
ಕಾನೂನು ಬಾಹಿರ ಭೂ ಪರಿವರ್ತನೆಯಿಂದ ಕೊಡಗಿನ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳೆಲ್ಲ ಪರಿವರ್ತಿತವಾಗಿ ಪ್ರವಾಸೋದ್ಯಮದ ಮೋಜಿನ ತಾಣವಾಗಿದೆ. ಈಗಲೂ ಸಹ ಯಾವುದೇ ಇಲಾಖೆ ಅನುಮತಿ ಇಲ್ಲದೆ ಸ್ಥಳೀಯ ಹೊಂದಾಣಿಕೆಯಿAದ ಬಾಹಿರವಾಗಿ ನಡೆಸುತಿರುವಂತಹ ಅದೆಷ್ಟೋ ಹೋಂಸ್ಟೇಗಳು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಆದ್ದರಿಂದ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಕಾನೂನು ಬಾಹಿರ ಭೂಪರಿವರ್ತನೆ ಹಾಗೂ ಕಾನೂನು ಬಾಹಿರ ಹೋಂಸ್ಟೇ ನಡೆಸುತ್ತಿರುವುದನ್ನು ಸಂಪೂರ್ಣ ನಿಯಂತ್ರಿಸಬೇಕೆAದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಚೇಂದAಡ ಪಿ. ಅಯ್ಯಪ್ಪ, ಜಂಟಿ ಕಾರ್ಯದರ್ಶಿ ಕರ್ತಮಾಡ ನವೀನ್ ಬೋಪಯ್ಯ ಇದ್ದರು.