ಮಡಿಕೇರಿ, ಜೂ. ೩: ಕರ್ನಾಟಕ ನಾಟಕ ಅಕಾಡೆಮಿಯ ವತಿಯಿಂದ ರಂಗಭೂಮಿ ಕ್ಷೇತ್ರದ ಕಲಾವಿದರನ್ನು ಪರಿಚಯಿಸುವಂತಹ ಬೃಹತ್ ರಂಗ ಸಂಪುಟವನ್ನು ಹೊರತರಲು ತೀರ್ಮಾನಿಸಲಾಗಿದ್ದು, ಈ ಸಂಬAಧ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವ ನಟರು, ನಿರ್ದೇಶಕರು, ನಾಟಕಕಾರರು, ಸಂಗೀತ ತಜ್ಞರು, ರಂಗ ಕುಶಲಕರ್ಮಿಗಳು ಹಾಗೇ ವೇಷಭೂಷಣ ಸೇರಿದಂತೆ ನೇಪಥ್ಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಲಾವಿದರ ವಿವರಗಳನ್ನು ಸಂಗ್ರಹಿಸಲು ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಇವರು ನಿರ್ಧರಿಸಲಾಗಿದೆ. ಆಸಕ್ತ ಇರುವವರು ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಇಲ್ಲಿಗೆ ತಮ್ಮ ವಿವರಗಳನ್ನು ನೀಡುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ ೦೮೦-೨೨೨೪೪೧೭೬ ನ್ನು ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ತಿಳಿಸಿದ್ದಾರೆ.