ಕುಶಾಲನಗರ, ಜೂ. ೨: ಐಪಿಎಲ್ ೨೦೨೬ ರ ಪಂದ್ಯಾಟದಲ್ಲಿ ಮತ್ತೆ ಆರ್‌ಸಿಬಿ ಕಪ್ ತನ್ನದಾಗಿಸಿಕೊಂಡ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣದಲ್ಲಿ ರಾತ್ರಿ ಸ್ಥಳೀಯ ಯುವಕರಿಂದ ಸಂಭ್ರಮಾಚರಣೆ ನಡೆಯಿತು.

ಪಟ್ಟಣದ ರಥಬೀದಿ ಗಣಪತಿ ದೇವಾಲಯ ಬಳಿ ಸೇರಿದ ನೂರಾರು ಸಂಖ್ಯೆಯ ಯುವಕರು ಪಟಾಕಿ ಸಿಡಿಸುವುದರೊಂದಿಗೆ ಪರಸ್ಪರ ಸಿಹಿ ಹಂಚಿ ಘೋಷಣೆ ಕೂಗಿದರು.