ಭತ್ತದ ಗದ್ದೆಗಳಿಗೆ ಮತ್ತೆ ಮರುಜೀವ
ಗ್ರಾಮದಲ್ಲಿ ನಿರಂತರ ಕಾಡಾನೆಗಳ ಉಪಟಳ ನಿಯಂತ್ರಿಸಲು ಅರಣ್ಯ ಇಲಾಖೆಯು ಕಂದಕ ನಿರ್ಮಾಣ, ಹ್ಯಾಂಗಿAಗ್ ಸೋಲಾರ್ ಫೆನ್ಸ್ ಹಾಗೂ ಸೋಲಾರ್ ಬೇಲಿಗಳನ್ನು ಅಳವಡಿಸಿತ್ತು. ಕಾಲಕ್ರಮೇಣ ಇದರ ನಿರ್ವಹಣೆ ಇಲ್ಲದೆ ಕೋಟ್ಯಂತರ ಬೆಲೆಬಾಳುವ ವಸ್ತುಗಳು ಮಣ್ಣುಪಾಲಾದವು. ಈ ಭಾಗದಲ್ಲಿ ಶೀತ ಪ್ರದೇಶವಿರುವುದರಿಂದ ರೈಲ್ವೇ ಬ್ಯಾರಿಕೇಡ್ ಪ್ರಸ್ತಾಪಕ್ಕೆ ಗ್ರಾಮಸ್ಥರು ಹತ್ತಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ನಿರಂತರ ಕಾಡಾನೆಗಳ ಉಪಟಳದಿಂದ ಭತ್ತದ ಗದ್ದೆಗಳನ್ನು ಪಾಳುಬಿಡುವಂತಾಯಿತು. ಕಾಫಿ ತೋಟಗಳನ್ನು ನಿರ್ವಹಣೆ ಮಾಡಲು ಕಷ್ಟ ಸಾಧ್ಯವಾಗಿತ್ತು. ಇದೀಗ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಅವರು ಖುದ್ದಾಗಿ ಆಗಮಿಸಿ ಇಲ್ಲಿಯ ಪರಿಸ್ಥಿತಿಯನ್ನು ಕಳೆದ ೨ ವರ್ಷಗಳ ಹಿಂದೆ ವೀಕ್ಷಣೆ ಮಾಡಿದ್ದರು. ತದನಂತರ ಗ್ರಾಮಸ್ಥರು ನೀಡಿರುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ರೈಲ್ವೇ ಬಾರಿಕೇಡ್ ಅಳವಡಿಕೆಗೆ ಸ್ಪಷ್ಟ ನಿರ್ದೇಶನ ನೀಡಿದ್ದರು. ಇದೀಗ ಕಾಮಗಾರಿ ನಡೆಯುತ್ತಿದ್ದು, ಅರಣ್ಯದಿಂದ ಕಾಡಾನೆಗಳು ಜನವಸತಿ ಪ್ರದೇಶಕ್ಕೆ ಬರುವುದನ್ನು ತಡೆಹಿಡಿಯಬಹುದಾಗಿದೆ. ಇದರಿಂದ ರೈತರ ಭತ್ತದ ಗದ್ದೆಗಳಿಗೆ ಮತ್ತೆ ಮರುಜೀವ ಬರಲಿದೆ. ಪಾಳುಬಿದ್ದ ಗದ್ದೆಗಳಲ್ಲಿ ಮತ್ತೆ ಭತ್ತ ಬೆಳೆಯುವಂತೆ ಕೃಷಿಕರು, ರೈತರು ಆಸಕ್ತಿ ವಹಿಸುವ ನಿರೀಕ್ಷೆಯಿದೆ.
ಇಟ್ಟಿರ ಚೇತನ್ ಪೊನ್ನಪ್ಪ, ಕಾಫಿ ಬೆಳೆಗಾರರು, ತಿತಿಮತಿ.