ಸೋಮವಾರಪೇಟೆ, ಜೂ. ೨: ಕೊಡಗು ಜಿಲ್ಲಾ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಸಂಘದ ವಾರ್ಷಿಕ ಮಹಾಸಭೆ ಸೋಮವಾರಪೇಟೆಯ ವಿರಕ್ತ ಮಠದಲ್ಲಿ ಜರುಗಿತು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹಾಗೂ ಸೋಮವಾರಪೇಟೆ ವಿರಕ್ತ ಮಠದ ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಮಹಾಸ್ವಾಮಿ ಅವರ ಸಾನ್ನಿಧ್ಯದಲ್ಲಿ ಸಭೆ ನಡೆಯಿತು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಮೂರ್ತಿ, ಅರ್ಚಕರು ಮತ್ತು ಪುರೋಹಿತರ ಸಂಘದ ಜಿಲ್ಲಾ ಅಧ್ಯಕ್ಷ ಹಿರೇಮಠಶಾಸ್ತಿç, ಉಪಾಧ್ಯಕ್ಷ ಮಹೇಶ್ ಜಿ. ಶಾಸ್ತಿç, ಕಾರ್ಯದರ್ಶಿ ಬಸವಕುಮಾರ ಶಾಸ್ತಿç, ಖಜಾಂಚಿ ಅಭಿಮಠದ ಮಹೇಶ್ ಶಾಸ್ತಿç, ನಿರ್ದೇಶಕರುಗಳಾದ ಚಂದ್ರಶೇಖರ ಶಾಸ್ತಿç, ವೀರಯ್ಯ ಹಿರೇಮಠ, ಶಾಂತಮಲ್ಲಯ್ಯ, ನಂಜುAಡಪ್ಪ, ಜಂಬೂರು ನಂಜಪ್ಪ, ಸೋಮಶೇಖರ, ಪುಷ್ಪಗಿರಿ ನಂದೀಶ್, ತ್ರಿಶಂಕು ಕುಮಾರ್, ವಿರೂಪಾಕ್ಷ ಇದ್ದರು.