ವೀರಾಜಪೇಟೆ, ಜೂ. ೧: ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ವೀರಾಜಪೇಟೆಯ ಮುಲ್ಲೆರ ಪೊನ್ನಮ್ಮ ಪೂವಣ್ಣ ಅವರು ಗಣನೀಯ ಸಾಧನೆ ಮಾಡಿದ್ದಾರೆ.
ಇತ್ತೀಚಿಗೆ ಗೋವಾದ ಬ್ಯಾಂಬೋಲಿಮ್ನಲ್ಲಿ ಜರುಗಿದ ಮೂರನೇ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಭಾರದ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಹಾಗೂ ನೂರು ಮೀಟರ್ ಓಟದಲ್ಲಿ ಹಾಗೂ ಜಾವೆಲಿನ್ನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.