ಮಡಿಕೇರಿ, ಜೂ. ೧: ಮಡಿಕೇರಿ ಹೊರವಲಯದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳೀರ್ವರ ನಡುವೆ ನಡೆದ ಮಾರಾಮಾರಿಯಲ್ಲಿ ಗಂಭೀರ ಗಾಯಗೊಂಡಿದ್ದ ಕೈದಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಟಿ. ಶೆಟ್ಟಿಗೇರಿಯ ನಾಲ್ವರು ಸಿವಿಲ್ ಪ್ರಕರಣದಲ್ಲಿ ಬಂದಿಗಳಾಗಿ ಕಾರಾಗೃಹ ಸೇರಿದ್ದರು. ಈ ಪೈಕಿ ನಿನ್ನೆ ಹೇಮಂತ್ ಹಾಗೂ ರಾಜೇಶ್ ಎಂಬವರುಗಳ ನಡುವೆ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಜಗಳವೇರ್ಪಟ್ಟು ಮಾರಾಮಾರಿ ನಡೆದಿತ್ತು. ಈ ಸಂದರ್ಭ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ರಾಜೇಶ್ ಚೂರಿಯಿಂದ ಹೇಮಂತ್‌ಗೆ ಇರಿದಿದ್ದು, ಗಂಭೀರ ಗಾಯಗೊಳಗಾಗಿದ್ದ ಹೇಮಂತ್‌ನನ್ನು ಕಾರಾಗೃಹದ ಅಧಿಕಾರಿಗಳು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ರಾತ್ರಿ ವೇಳೆ ಹೇಮಂತ್ ಸಾವನ್ನಪ್ಪಿದ್ದಾರೆ.