ಮಡಿಕೇರಿ, ಜೂ. ೨: ಶನಿವಾರದಂದು ಸಂತ ಮೈಕಲರ ಶಿಕ್ಷಣ ಸಂಸ್ಥೆಗೆ ನೂತನವಾಗಿ ಆಗಮಿಸಿದ್ದ ಸಂಚಾಲಕರಾದ ರೆ.ಫಾ. ಪ್ಯಾಟ್ರಿಕ್ ಕ್ಸೇವಿಯರ್ ಅವರಿಗೆ ಸಂಸ್ಥೆಯ ವತಿಯಿಂದ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ರೆ.ಫಾ. ಪ್ಯಾಟ್ರಿಕ್ ಕ್ಸೇವಿಯರ್ ಅವರು ಸಂಸ್ಥೆಯ ಮುಖ್ಯಸ್ಥರು ಮತ್ತು ಶಿಕ್ಷಕ ವೃಂದದವರ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾಗಮಂಡಲ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ದಿವಾಕರ ಅವರು ಮಾತನಾಡಿ, ಪ್ರತಿಯೊಬ್ಬ ಗುರುವು ಸದ್ಗುರು ಆಗಬೇಕು. ಪಠ್ಯವನ್ನು ಕಲಿಸುವುದರ ಜೊತೆಗೆ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ರೂಪಿಸಬೇಕು. ಶಿಕ್ಷಕ ವೃತ್ತಿ ಎಂಬುದು ಬಹಳ ಪವಿತ್ರವಾದುದು ಎಂದರು. ಕಾಲೇಜಿನ ಉಪನ್ಯಾಸಕ ವೃಂದದವರ ಒಡನಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಪ್ರಾಂಶುಪಾಲರಾದ ಪಂಕಜ, ಮುಖ್ಯೋಪಾಧ್ಯಾಯರಾದ ಜೆಫ್ರಿ ಡಿಸಿಲ್ವ, ಸಿಸ್ಟರ್ ಸರಿತಾ, ಸಿಸ್ಟರ್ ಸಿಸಿಲಿಯಾ ಅವರುಗಳು ಉಪಸ್ಥಿತರಿದ್ದರು.

ಕೇಶವ್ ಸ್ವಾಗತಿಸಿದರು. ವಿಲ್ಮ ಮತ್ತು ಲ್ಯಾನ್ಸಿ ಅವರು ಕಾರ್ಯಕ್ರಮ ನಿರೂಪಿಸಿದರು.