ಮಡಿಕೇರಿ, ಜೂ. ೨: ಕೋಡಂಬೂರು ಶ್ರೀ ಭದ್ರಕಾಳಿ ಮತ್ತು ಶ್ರೀ ಧರ್ಮಶಾಸ್ತಾವು ಅಯ್ಯಪ್ಪ ದೇವರ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಮೇ ೧೭ ರಂದು ದೇವಸ್ಥಾನದಲ್ಲಿ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಸೇರಿ ಹಬ್ಬದ ಕಟ್ಟು ಹಾಕುವ ಕಾರ್ಯ ನಡೆಸಲಾಯಿತು.
ತಾ. ೨೪ ರಿಂದ ೨೬ ರವರೆಗೆ ಕೇರಳದ ತಂತ್ರಿಗಳಾದ ಶ್ರೀ ಎಡಬಲತ ಕುಬೇರ ನಂಬೂದ್ರಿಪಾಡ್ (ರಾಜ) ಅವರ ಮುಂದಾಳತ್ವದಲ್ಲಿ ಶ್ರೀ ಮಹಾಗಣಪತಿ ಹೋಮ, ನಾಗಸ್ಥಾನ, ನವಗ್ರಹ, ವಾಸ್ತುಬಲಿ ಪೂಜೆ, ಧ್ವಜಸ್ತಂಭದ ಪೂಜೆ, ಬೇಟೆ ಅಯ್ಯಪ್ಪ ಪೂಜೆ, ಐದುಕೂಟು ಮೂರ್ತಿಗಳ ಕುರ್‌ದಿ ಪೂಜೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆದವು. ಬಳಿಕ ಎತ್ತುಪೋರಾಟದ ಮೂಲಕ ದೇವಿಗೆ ಗೌರವ ಅರ್ಪಣೆ ಮಾಡಲಾಯಿತು.
ತಾ. ೨೬ ರಂದು ಅಪರಾಹ್ನ ೩ ಗಂಟೆಗೆ ಭದ್ರಕಾಳಿ ದೇವಿಯ ಜಳಕ. ಬಲಮುರಿ ಕಾವೇರಿ ಹೊಳೆಯಲ್ಲಿ ಜಳಕದ ಬಳಿಕ ಚಂಡೆಮದ್ದಳೆಯೊAದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಂತರ ದೇವಸ್ಥಾನದ ಸುತ್ತಲೂ ವಿವಿಧ ನೃತ್ಯ, ಸಂಪ್ರೋಕ್ಷಣೆ ನಡೆಯಿತು.
ತಾ. ೨೭ ರಂದು ಕೂಟು ಮೂರ್ತಿಗಳ ತೆರೆ, ತೋತದೊಂದಿಗೆ ಮಧ್ಯಾಹ್ನ ೧೨ ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರ ಕೋಲ, ಬಾರಣಿಯೊಂದಿಗೆ ಉತ್ಸವ ಸಂಪನ್ನಗೊAಡಿತು. ಉತ್ಸವದ ಎಲ್ಲಾ ದಿನದಂದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ದೇವಸ್ಥಾನ ಸಮಿತಿಯ ಅಧ್ಯಕ್ಷ ಮೂಡೇರ ಅಶೋಕ್, ಗೌರವ ಕಾರ್ಯದರ್ಶಿ ಚೆಟ್ಟಿಮಾಡ ಬಾಲಕೃಷ್ಣ, ಖಜಾಂಚಿ ಕಾಂಞAಗಡ ಸಿ. ದೇವಯ್ಯ, ದರ್ಶನ ಪಾತ್ರಿ, ಅಚ್ಚಪಂಡ ಪಟ್ಟು ನಾಣಯ್ಯ, ಅರ್ಚಕರಾದ ರಘುಪತಿ ಭಟ್ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು, ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಹಾಜರಿದ್ದರು. - ಸಾಬ