ಸೋಮವಾರಪೇಟೆ, ಜೂ. ೨: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿರುವ ಸಿ ಮತ್ತು ಡಿ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ, ೯೪ ಸಿ. ಅಡಿಯಲ್ಲಿ ಲಭ್ಯವಾಗದ ಹಕ್ಕುಪತ್ರ, ಸೆಕ್ಷನ್ ೪ ಹೆಸರಿನಲ್ಲಿ ರೈತರಿಗೆ ನೋಟೀಸ್, ಕಾಫಿ ತೋಟವನ್ನು ಕಡಿದು ಪರಿಹಾರ ನೀಡದ ಅರಣ್ಯ ಇಲಾಖೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಈವರೆಗೆ ಸರ್ಕಾರಗಳು ಈಡೇರಿಸಿಲ್ಲ ಎಂದು ಆರೋಪಿಸಿರುವ ರೈತ ಹೋರಾಟ ಸಮಿತಿ, ತಾ. ೧೬ ರಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಆಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದೆ.
ರೈತ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆದು, ಸರ್ಕಾರಗಳ ನಿರ್ಲಕ್ಷö್ಯವನ್ನು ಖಂಡಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಚಕ್ರವರ್ತಿ ಸುರೇಶ್ ಅವರು, ರೈತರು ಅನಾದಿ ಕಾಲದಿಂದಲೂ ನೆಲೆನಿಂತಿರುವ, ಕೃಷಿ ಮಾಡಿಕೊಂಡು ಜೀವನ ಕಂಡುಕೊAಡಿರುವ ಭೂಮಿಯನ್ನು ಅರಣ್ಯವನ್ನಾಗಿಸಲು ಹುನ್ನಾರ ನಡೆಸಲಾಗುತ್ತಿದೆ. ಸಿ ಮತ್ತು ಡಿ ವರ್ಗದ ಭೂಮಿಯಲ್ಲಿ ರೈತರು ಗಿಡಮರಗಳನ್ನು ನೆಟ್ಟು ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಇಂತಹ ಜಾಗವನ್ನು ಇದೀಗ ಅರಣ್ಯಕ್ಕೆ ಸೇರಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಸಿ ಮತ್ತು ಡಿ ಭೂಮಿ ಸಮಸ್ಯೆಯನ್ನು ಬಗೆಹರಿಸುವಂತೆ ಈ ಹಿಂದೆ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಸೋಮವಾರಪೇಟೆ ತಾಲೂಕು ಬಂದ್ ಮಾಡಲಾಗಿದೆ. ನೂರಾರು ಮನವಿಗಳನ್ನು ಅಧಿಕಾರಿಗಳು, ಶಾಸಕರು, ಸಚಿವರು, ಸಂಸದರು, ಮುಖ್ಯಮಂತ್ರಿಗಳಿಗೂ ನೀಡಲಾಗಿದೆ. ಆದರೆ ಈವರೆಗೆ ಸಮಸ್ಯೆ ಬಗೆಹರಿದಿಲ್ಲ ಎಂದು ಸುರೇಶ್ ಹೇಳಿದರು.
ಸರ್ಕಾರವು ಸಿ ಮತ್ತು ಡಿ ವರ್ಗದ ಭೂಮಿಗೆ ಸಂಬAಧಿಸಿದAತೆ ಅಧ್ಯಯನ ನಡೆಸಿ ವರದಿ ನೀಡಲು ಸಮಿತಿಯೊಂದನ್ನು ರಚಿಸಿದ್ದು, ವರದಿ ಸಲ್ಲಿಕೆಯ ಅವಧಿ ಕಳೆದ ಮೇ. ೨೧ಕ್ಕೆ ಮುಕ್ತಾಯಗೊಂಡಿದೆ. ಆದರೆ ಈ ವರದಿ ಸಂಪೂರ್ಣವಾಗಿದೆಯೇ? ಸರ್ಕಾರಕ್ಕೆ ಸಲ್ಲಿಕೆಯಾಗಿದೆಯೇ? ಯಾವೆಲ್ಲಾ ಅಂಶಗಳಿವೆ? ಎಂಬ ಬಗ್ಗೆ ಈವರೆಗೆ ಮಾಹಿತಿ ಲಭಿಸಿಲ್ಲ ಎಂದರು.
ಇದರೊAದಿಗೆ ಅರಣ್ಯ ಇಲಾಖೆಯವರು ಸೆಕ್ಷನ್ ೪ ಹೆಸರಿನಲ್ಲಿ ರೈತರಿಗೆ ಅನಗತ್ಯ ತೊಂದರೆ ಕೊಡುತ್ತಿದ್ದಾರೆ. ಸರ್ಕಾರ ಅಧ್ಯಯನ ಸಮಿತಿಯನ್ನು ರಚಿಸಿ ೬ ತಿಂಗಳ ಕಾಲಾವಕಾಶ ನೀಡಿದ್ದರೂ ಸಹ ಇದೇ ಅವಧಿಯಲ್ಲಿ ಅರಣ್ಯ ಇಲಾಖೆ ರೈತರಿಗೆ ನೋಟೀಸ್ ನೀಡಿ ಒಕ್ಕಲೆಬ್ಬಿಸಲು ಹಲವು ಬಾರಿ ಪ್ರಯತ್ನಿಸಿದೆ. ಇದನ್ನು ಗಮನಿಸಿದರೆ ಸರ್ಕಾರಗಳು ರೈತರ ಪರವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಸುರೇಶ್ ಹೇಳಿದರು. ೯೪ ಸಿ ಅಡಿಯಲ್ಲಿ ಹಕ್ಕುಪತ್ರಕ್ಕೆ ಮನವಿ ಸಲ್ಲಿಸಿರುವ ಹಲವಷ್ಟು ರೈತರು, ಬಡವರಿಗೆ ಈವರೆಗೆ ದಾಖಲೆಗಳನ್ನು ಒದಗಿಸಿಲ್ಲ.
ಮುಕ್ಕೋಡ್ಲು ಗ್ರಾಮದ ನಾಣಿಯಪ್ಪ ಅವರಿಗೆ ಸೇರಿದ ಕಾಫಿ, ಏಲಕ್ಕಿ ತೋಟವನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ಕಡಿದು ನಾಶಗೊಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ನಾಣಿಯಪ್ಪ ಅವರಿಗೆ ಈವರೆಗೆ ಪರಿಹಾರವನ್ನೂ ಒದಗಿಸಿಲ್ಲ. ರೈತ ಹೋರಾಟ ಸಮಿತಿಯಿಂದ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿದ್ದರೂ ಎಂದಿನAತೆ ನಿರ್ಲಕ್ಷö್ಯ ವಹಿಸಲಾಗಿದೆ ಎಂದು ಚಕ್ರವರ್ತಿ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಅಳಿವು ಉಳಿವಿನ ಪ್ರಶ್ನೆಯಾಗಿರುವ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕಿತ್ತು. ಶಾಸಕರು, ಸಂಸದರು ಹೆಚ್ಚಿನ ಗಮನ ಹರಿಸಬೇಕಿತ್ತು. ಸರ್ಕಾರ ರಚಿಸಿದ ಅಧ್ಯಯನ ಸಮಿತಿ ಕೇವಲ ಕಣ್ಣೊರೆಸುವ ತಂತ್ರದAತೆ ರೈತರಿಗೆ ಕಾಣುತ್ತಿದೆ. ಹೀಗಾಗಿ ಮತ್ತೊಮ್ಮೆ ಉಗ್ರ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿದ್ದ ರೈತ ಸಂಘದ ಉಪಾಧ್ಯಕ್ಷ ಹೂವಯ್ಯ ಮಾಸ್ಟರ್ ಮಾತನಾಡಿ, ತಾ. ೧೫ ರಂದು ಜಿಲ್ಲಾಧಿಕಾರಿಗಳು ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಆಯೋಜಿಸಿರುವ ಜನಸ್ಪಂದನಾ ಸಭೆಗೆ ಆಗಮಿಸಲಿದ್ದಾರೆ. ಎಲ್ಲಾ ರೈತರು ಆಗಮಿಸಿ ಸಮಸ್ಯೆಯನ್ನು ಮತ್ತೊಮ್ಮೆ ಜಿಲ್ಲಾಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ತರಬೇಕಿದೆ ಎಂದರು. ರೈತ ಸಂಘದ ತಾಲೂಕು ಅಧ್ಯಕ್ಷ ಕೂತಿ ದಿನೇಶ್ ಮಾತನಾಡಿ, ರೈತರ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷö್ಯ ತೋರುತ್ತಿದ್ದಾರೆ. ಶಾಂತಿಯುತ ಪ್ರತಿಭಟನೆಯಿಂದ ಪ್ರಯೋಜನ ವಿಲ್ಲ. ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಇನ್ನಷ್ಟು ಉಗ್ರಗೊಳಿಸಬೇಕು. ಹಾಗಾದಾಗ ಮಾತ್ರ ಅಧಿಕಾರಿಗಳು, ಜನಪ್ರತಿನಿಧಿಗಳು ರೈತರ ಬಳಿಗೆ ಬರುತ್ತಾರೆ ಎಂದರು. ಹಿರಿಯ ಕಾಫಿ ಬೆಳೆಗಾರ ಅನಂತರಾಮ್ ಮಾತನಾಡಿ, ಸಣ್ಣ ಪುಟ್ಟ ಬೆಳೆಗಾರರ ಅಳಿವು ಉಳಿವಿನ ಪ್ರಶ್ನೆ ಇದಾಗಿದ್ದು, ಹೋರಾಟ ಅನಿವಾರ್ಯವಾಗಿದೆ ಎಂದರು.
ಹೋರಾಟಗಾರ ನಾಪಂಡ ಮುತ್ತಪ್ಪ ಮಾತನಾಡಿ, ನೂತನ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಿ ಸಮಸ್ಯೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಬೇಕು. ಸರ್ಕಾರಗಳು ರೈತರ ಸಮಸ್ಯೆಯನ್ನು ಆಲಿಸಿ ಬಗೆಹರಿಸುವಂತಾಗಬೇಕು.
ಈವರೆಗಿನ ಶಾಂತಿಯುತ ಪ್ರತಿಭಟನೆಯಿಂದ ಪ್ರಯೋಜನ ಶೂನ್ಯವಾಗಿದೆ. ಅಧ್ಯಯನ ಸಮಿತಿಯೇ ಬೋಗಸ್ ಆಗಿದೆಯೇ ಎಂಬ ಬಗ್ಗೆಯೂ ಸಂಶಯ ಮೂಡುತ್ತಿದೆ. ಈ ಹಿನ್ನೆಲೆ ರೈತರು ಇನ್ನಷ್ಟು ಸಂಘಟಿತರಾಗಿ ಹೋರಾಟಕ್ಕೆ ಇಳಿಯಬೇಕೆಂದು ಅಭಿಪ್ರಾಯಿಸಿದರು.
ಸಭೆಯಲ್ಲಿ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕಿನ ಹಲವಷ್ಟು ಗ್ರಾಮಗಳ ಗ್ರಾಮಮಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ವಿವಿಧ ಸಂಘ-ಸAಸ್ಥೆಗಳ ಮುಖಂಡರುಗಳು ಸೇರಿದಂತೆ ೨೫೦ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು.
ಅಂತಿಮವಾಗಿ ತಾ. ೧೬ ರಿಂದ ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಆಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಲಾಯಿತು. ರೈತರು ಚಾಪೆ, ಬೆಡ್‌ಶೀಟ್, ಪೇಸ್ಟ್, ಬ್ರಷ್, ಸೋಪು, ಬಟ್ಟೆಯೊಂದಿಗೆ ಪ್ರತಿಭಟನೆಗೆ ಆಗಮಿಸಬೇಕು. ಊಟೋಪಚಾರದ ಖರ್ಚನ್ನೂ ರೈತರೇ ಭರಿಸಬೇಕು. ಇದು ರೈತರ ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ಯಾವ ಕಾರಣಕ್ಕೂ ಹಿಂದೆ ಸರಿಯಬಾರದು ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಹೇಳಿದರು. ಹೋರಾಟಕ್ಕೆ ನಮ್ಮ ಗ್ರಾಮದಿಂದಲೂ ಸಾರ್ವಜನಿಕರು ಆಗಮಿಸುತ್ತಾರೆ. ಧರಣಿಗೆ ನಾವುಗಳೂ ಸಂಪೂರ್ಣ ಬೆಂಬಲ ನೀಡುವುದಾಗಿ ಗ್ರಾಮಾಭಿವೃದ್ಧಿ ಸಮಿತಿ ಪ್ರಮುಖರುಗಳು ತಿಳಿಸಿದರು.