ಮಡಿಕೇರಿ, ಮೇ ೩೦: ಚೆನ್ನೆöÊನ ಮನೋಗಾನಂ ಸ್ಕೂಲ್ ಆಫ್ ಮ್ಯೂಸಿಕ್ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಇಂದು ತಲಕಾವೇರಿ ಸನ್ನಿಧಿಯಲ್ಲಿ ಕರ್ನಾಟಕ ಶಾಸ್ತಿçÃಯ ಗಾನ ಕಛೇರಿಯನ್ನು ನಡೆಸಿಕೊಟ್ಟರು, ಸಂಗೀತ ಗೌರವಾರ್ಥವಾಗಿ ೫ ರಿಂದ ೫೦ ವರ್ಷ ವಯಸ್ಸಿನ ವಿದ್ಯಾರ್ಥಿಗಳು ಪುರಂದರ ದಾಸ, ಪಾಪನಾಸಂ ಶಿವನ್, ತ್ಯಾಗರಾಜರ್, ಶ್ರೀ ಮುತ್ತುಸ್ವಾಮಿ ದೀಕ್ಷಿತರ್, ಊತುಕಾಡು ವೆಂಕಟ ಕವಿ ಮತ್ತು ಅರುಣಾಚಲ ಕವಿಗಳ ರಚನೆಗಳನ್ನು ಪ್ರಸ್ತುತಪಡಿಸಿದರು.

ಹಿಂದಿನ ವರ್ಷಗಳಲ್ಲಿ ಮನೋಗಾನಂ ತಮ್ಮ ವಾರ್ಷಿಕ ಸಂಗೀತ ಮತ್ತು ಸಾಂಸ್ಕೃತಿಕ ಹೊರರಾಜ್ಯ ಪ್ರವಾಸದ ಭಾಗವಾಗಿ ವಿರೂಪಾಕ್ಷ ದೇವಸ್ಥಾನ (ಹಂಪಿ), ಚಂದ್ರಮೌಳೀಶ್ವರ ದೇವಸ್ಥಾನ (ಹುಬ್ಬಳ್ಳಿ), ನವನೀತ ಕೃಷ್ಣ ದೇವಸ್ಥಾನ (ಚನ್ನಪಟ್ಟಣ), ಮತ್ತು ಕೋದಂಡ ರಾಮಸ್ವಾಮಿ ದೇವಸ್ಥಾನ (ಚೆಂಗಲ್ಪಟ್ಟು) ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪ್ರದರ್ಶನ ನೀಡಿದೆ. ಸಂಗೀತವು ಕಾಯಿಲೆ ಗುಣಪಡಿಸುವ ಮತ್ತು ಮಾನಸಿಕವಾಗಿ ಉನ್ನತೀಕರಿಸುವ ಶಕ್ತಿಯನ್ನು ಹೊಂದಿದೆ ಮತ್ತು ಸಂಸ್ಕೃತಿ, ಪರಂಪರೆ, ಪ್ರಯಾಣ, ಅಧ್ಯಾತ್ಮಿಕತೆ, ರಕ್ತಸಂಬAಧ ಮತ್ತು ಸಕಾರಾತ್ಮಕತೆ ಎಲ್ಲವೂ ಅದರೊಂದಿಗೆ ಬೇರ್ಪಡಿಸಲಾಗದಂತೆ ಹೆಣೆದುಕೊಂಡಿವೆ ಎಂದು ಮನೋಗಾನಂನ ಸಂಸ್ಥಾಪಕಿ ಎ. ರಾಮಶ್ರೀ ಪರ್ನಂದಿ ಹೇಳಿದರು.