ಸುಂಟಿಕೊಪ್ಪ, ಮೇ ೨೯: ಎತ್ತ ನೋಡಿದರೂ ಕನ್ನಡ ಬಾವುಟಗಳ ಹಾರಾಟ, ಕನ್ನಡ ಬಾವುಟ, ಬಂಟಿAಗ್ಸ್ಗಳಿAದ ಸಿಂಗಾರಗೊAಡಿದ್ದ ಪಟ್ಟಣ, ಸಮಾಜಕ್ಕೆ ಸೇವೆ ಸಲ್ಲಿಸಿದ ಹಿರಿಯ ವ್ಯಕ್ತಿಗಳ ಹಾಗೂ ಸಮಾಜಗಳ, ಸಂಘಟನೆಗಳ, ಧಾರ್ಮಿಕ ಕೇಂದ್ರಗಳ ಹೆಸರಿನಲ್ಲಿ ಅಲ್ಲಲ್ಲಿ ನಿರ್ಮಿಸಲಾಗಿದ್ದ ಪ್ರವೇಶ ದ್ವಾರಗಳು, ಆಕರ್ಷಣೀಯ ಮೆರವಣಿಗೆ, ಭವ್ಯ ಸಭಾಂಗಣದಲ್ಲಿ ಕನ್ನಡದ ಹಿರಿಮೆ ಗರಿಮೆಯನ್ನು ಸಾರುವಂತಹ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವಿವಿಧ ಜಾತಿ ಧರ್ಮದವರು ಸಹಬಾಳ್ವೆಯಿಂದ ನೆಲೆಸುವ ಮೂಲಕ ಸೌಹಾರ್ದತೆಯ ಬೀಡು ಎಂದೇ ಹೆಸರುವಾಸಿಯಾಗಿರುವ ಸುಂಟಿಕೊಪ್ಪದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕೊಡಗು ಜಿಲ್ಲಾ ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡದ ಸೊಗಡನ್ನು ಪ್ರತಿಬಿಂಬಿಸಿತು.
ಆಕರ್ಷಣೀಯ ಮೆರವಣಿಗೆ
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಬೆಳಿಗ್ಗೆ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ ಬಳಿಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭಗೊAಡಿತು. ಮೆರವಣಿಗೆಗೆ ವಿಜಯ ಪ್ಲಾಂಟೇಷನ್‌ನ ಎಸ್.ಜಿ. ಶ್ರೀನಿವಾಸ್ ಚಾಲನೆ ನೀಡಿದರು.
ಬೆಳ್ಳಿ ರಥದಲ್ಲಿ ಕನ್ನಡಾಂಬೆಯ ಪ್ರತಿಮೆಯೊಂದಿಗೆ ಸಮ್ಮೇಳನ ಅಧ್ಯಕ್ಷರಾದ ಸಾಹಿತಿ ಅಬ್ದುಲ್ ರಶೀದ್, ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್.ನಾಗೇಶ್, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಸಬಾಸ್ಟಿನ್, ಸಮ್ಮೇಳನ ಹಣಕಾಸು ಸಮಿತಿ ಅಧ್ಯಕ್ಷ ಎ.ಲೋಕೇಶ್ ಕುಮಾರ್ ಇವರುಗಳು ಇದ್ದರು. ಮೆರವಣಿಗೆಯು ಶಾಲೆ ಬಳಿಯಿಂದ ಆರಂಭಗೊAಡು ಮುಖ್ಯ ರಸ್ತೆ ಮೂಲಕ ಅಯ್ಯಪ್ಪ ದೇವಾಲಯದವರೆಗೆ ತೆರಳಿ ಅಲ್ಲಿಂದ ಎಸ್.ಎಸ್.ಇಂಟರ್ ನ್ಯಾಷನಲ್ ಹಾಲ್‌ನ ಗುಂಡುಗುಟ್ಟಿ ಮಂಜನಾಥಯ್ಯ ಸಭಾಂಗಣವನ್ನು ತಲುಪಿತು.
ಮೆರವಣಿಗೆಯಲ್ಲಿ ಮಂಗಳ ವಾದ್ಯ, ಚಂಡೆ ವಾದ್ಯ, ಕಳಶ ಹೊತ್ತ ಮಹಿಳೆಯರು, ಸ್ಥಬ್ಧ ಚಿತ್ರಗಳು , ಗೊಂಬೆ ಕುಣಿತ, ಡೊಳ್ಳು ಕುಣಿತ, ಬ್ಯಾಂಡ್ ಸೆಟ್ ಗಮನ ಸೆಳೆಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಜೀವಿನಿ ಮಹಿಳಾ ಒಕ್ಕೂಟ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಅಂಗನವಾಡಿ ಸಂಘಟನೆ, ಸ್ತ್ರೀ ಶಕ್ತಿ ಒಕ್ಕೂಟದವರು, ಆಶಾ ಕಾರ್ಯಕರ್ತೆಯರು, ಶಿಕ್ಷಕರುಗಳು, ವಿವಿಧ ಸಮಾಜಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಆಟೋ ಮತ್ತು ವಾಹನ ಚಾಲಕರ ಸಂಘದವರು, ಎನ್.ಎಸ್.ಎಸ್ ತಂಡ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಇನ್ನಿತ್ಯಾದಿ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಧ್ವಜಾರೋಹಣ
ರಾಷ್ಟ್ರ ಧ್ವಜವನ್ನು ಸಮ್ಮೇಳನದ ಹಣಕಾಸು ಸಮಿತಿ ಅಧ್ಯಕ್ಷ ಎ.ಲೋಕೇಶ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಧ್ವಜವನ್ನು ಕಸಾಪ ಅಧ್ಯಕ್ಷ ಕೇಶವ ಕಾಮತ್, ಕನ್ನಡ ಧ್ವಜವನ್ನು ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್ ಆರೋಹಣ ಮಾಡಿದರು.
ಕೃತಿಗಳ ಲೋಕಾರ್ಪಣೆ
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಂಟು ಕೃತಿಗಳು ಲೋಕಾರ್ಪಣೆಗೊಂಡವು.
ಇ.ಸುಲೇಮಾನ್ ರಚಿತ ‘ರಾಗವಿಲ್ಲದ ಕವಿತೆ’, ಹೆಚ್. ಮಂಜುನಾಥ್ ಚಿರಕನಹಳ್ಳಿ ರಚಿತ ‘ಮನುಷ್ಯತ್ವದ ಸಾರ’, ಜಯಪ್ರಕಾಶ್ ಪುತ್ತೂರು ರಚಿತ ‘ವ್ಯಕ್ತಿತ್ವ ವಿಕಸನದ ವಿಚಾರ ಧಾರೆ’, ಡಾ. ಬೆಸೂರು ಮೋಹನ್ ಪಾಳೆಗಾರ್ ರಚಿತ ‘ಸ್ವಾತಂತ್ರö್ಯ ಕ್ರಾಂತಿಯ ಕಿಡಿ’, ಗಣೇಶ ಶರ್ಮ ರಚಿತ ‘ಮಕ್ಕಳ ಕಥೆ’, ಹೇಮಂತ್ ಪಾರೇರ ರಚಿತ ‘ಶಕುನದ ಹಕ್ಕಿ’, ಲಾವಣ್ಯ ಮೋಹನ್ ರಚಿತ ಛಾಯಾ, ಜಯಲಕ್ಷಿö್ಮ ರಚಿತ ‘ಮನದ ಮಡಿಲೊಳಗೆ’ ಕೃತಿಗಳನ್ನು ಸಮಾರಂಭದ ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆಗೊಳಿಸಿದರು.
ಮಹಾದ್ವಾರ-ಪುಸ್ತಕ ಮಳಿಗೆ-ಸಭಾಂಗಣ ಉದ್ಘಾಟನೆ
ಸಾಹಿತಿ ದಿ.ಡಿ.ಎನ್. ಕೃಷ್ಣಯ್ಯ ಮಹಾದ್ವಾರವನ್ನು ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಡಿ ವಿಜೇತ್ ಉದ್ಘಾಟಿಸಿದರು. ಸಾಹಿತಿ ದಿ.ಜಿ.ಟಿ. ನಾರಾಯಣರಾವ್ ಪುಸ್ತಕ ಮಳಿಗೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿ ಮಂಜುನಾಥ್ ಉದ್ಘಾಟಿಸಿದರು. ದಿ.ಬಿ.ಎಫ್. ಮೊಹೀದಿನ್ ಚಿತ್ರಕಲಾ ಮತ್ತು ಛಾಯಾಚಿತ್ರ ಪ್ರದರ್ಶನ ಮಳಿಗೆಯನ್ನು ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಉದ್ಘಾಟಿಸಿದರು.
ದಿ. ಕಮಲ ಕರಿಯಪ್ಪ ಸ್ತ್ರೀಶಕ್ತಿ ಮಳಿಗೆಯನ್ನು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಉದ್ಘಾಟಿಸಿದರೆ, ಗುಂಡುಗುಟ್ಟಿ ಮಂಜನಾಥಯ್ಯ ಸಭಾಂಗಣವನ್ನು ಮಡಿಕೇರಿಯ ವುಡ್ ಸ್ಟಾಕ್ ರೆಸಾರ್ಟ್ನ ಮಾಲೀಕ ನಿಜಾಮುದ್ದಿನ್ ಸಿದ್ದಿಕ್ ಉದ್ಘಾಟಿಸಿದರು.
ಕವಿಶಿಷ್ಯ ಪಂಜೆ ಮಂಗೇಶರಾಯರ ವೇದಿಕೆಯನ್ನು ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಉದ್ಘಾಟಿಸಿದರು.
“ಸಾಹಿತ್ಯ ಸೌಹಾರ್ದ” ಅನಾವರಣ
೧೭ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಹೊರ ತರಲಾದ” ಸಾಹಿತ್ಯ ಸೌಹಾರ್ದ” ಸ್ಮರಣ ಸಂಚಿಕೆಯನ್ನು ಸಮಾರಂಭದ ವೇದಿಕೆಯಲ್ಲಿ ಅತಿಥಿಗಳು ಬಿಡುಗಡೆ ಮಾಡಿದರು. ೪ಐದನೇ ಪುಟಕ್ಕೆ
೧೯ ದ್ವಾರಗಳ ಉದ್ಘಾಟನೆ
ಸಮ್ಮೇಳನದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಿದ ಹಿರಿಯ ವ್ಯಕ್ತಿಗಳ ಹಾಗೂ ಸಮಾಜಗಳ, ಸಂಘಟನೆಗಳ, ಧಾರ್ಮಿಕ ಕೇಂದ್ರಗಳ ಹೆಸರಿನಲ್ಲಿ ೧೯ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿತ್ತು.ಯಂಕನಮನೆ ಕುಟುಂಬಸ್ಥರ ಪ್ರವೇಶ ದ್ವಾರ, ಪಟ್ಟೆಮನೆ ಕುಟುಂಬಸ್ಥರ ಪ್ರವೇಶ ದ್ವಾರ, ದಿ.ಎಂ.ಪಿ ಮೊಯ್ದು ನೆನಪಿನ ಪ್ರವೇಶ ದ್ವಾರ (ಶ್ರೀರಾಮ ಬಡಾವಣೆ ರಸ್ತೆ), ಜಿ ಟೌನ್ ಸಂಸ್ಥೆ ಸ್ವಾಗತ ದ್ವಾರ (ಕೆ.ಇ.ಬಿ ಬಳಿ),ದಿ.ಮದುರಮ್ಮ ನೆನಪಿನ ಪ್ರವೇಶ ದ್ವಾರ, ಕೊಡವ ಸಮಾಜ ಪ್ರವೇಶ ದ್ವಾರ, ದಿ.ಖತೀಜ ಉಮ್ಮ ನೆನಪಿನ ಪ್ರವೇಶ ದ್ವಾರ, ಸಲಫಿ ಮಸೀದಿ ಪ್ರವೇಶ ದ್ವಾರ,ದಿ. ಎಂ.ಎನ್ ಕುಮಾರಪ್ಪ ನೆನಪಿನ ಪ್ರವೇಶ ದ್ವಾರ, ಸಿ.ಎಸ್.ಐ ಇಮ್ಯಾನುಯಲ್ ಚರ್ಚ್ ಸ್ವಾಗತ ದ್ವಾರ, ಸಂತ ಅಂತೋಣಿ ಚರ್ಚ್ ಸ್ವಾಗತ ದ್ವಾರ (ಸುಂಟಿಕೊಪ್ಪ-ಮಾದಾಪುರ ರಸ್ತೆ), ಗೌಡ ಸಮಾಜ ಸ್ವಾಗತ ಪ್ರವೇಶ ದ್ವಾರ, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಪ್ರವೇಶ ದ್ವಾರ, ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಪ್ರವೇಶ ದ್ವಾರ, ಬ್ಲೂ ಬಾಯ್ಸ್ ಸ್ವಾಗತ ದ್ವಾರ, ಶ್ರೀರಾಮ ಮಂದಿರ ಪ್ರವೇಶ ದ್ವಾರ, ದಿ. ಎಸ್.ಕೆ ಗೋವಿಂದಯ್ಯ ನೆನಪಿನ ಪ್ರವೇಶ ದ್ವಾರ, ದಿ. ಎಸ್.ಎಂ ಸಯಿದ್ ನೆನಪಿನ ಪ್ರವೇಶ ದ್ವಾರ (ಗದ್ದೆಹಳ್ಳ) , ದಿ. ಟಿ.ವಿ. ರಾಮರಾಜು ನಾಯ್ಡು ನೆನಪಿನ ಪ್ರವೇಶ ದ್ವಾರಗಳನ್ನು ವಿವಿಧ ಕ್ಷೇತ್ರಗಳ ಗಣ್ಯರು ಉದ್ಘಾಟನೆ ಮಾಡಿದರು.
ವರದಿ : ಉಜ್ವಲ್ ರಂಜಿತ್,
ಸಹಕಾರ : ರಾಜು ರೈ, ಚಿತ್ರಗಳು : ಲಕ್ಷಿö್ಮÃಶ್