ಮಡಿಕೇರಿ, ಮೇ ೩೦: ಸಂಚಾರಿ ನಿಯಮ ಉಲ್ಲಂಘಿಸಿದ ಹಿನ್ನೆಲೆ ಮಡಿಕೇರಿ ನಗರ ಸಂಚಾರಿ ಪೊಲೀಸರು ಕಾರು ಚಾಲಕನಿಗೆ ದಂಡ ವಿಧಿಸಿ ಕ್ರಮಕೈಗೊಂಡಿದ್ದಾರೆ.
ನಗರದಲ್ಲಿ ಅತೀ ವೇಗವಾಗಿ ವಾಹನ ಚಲಾಯಿಸುತ್ತಿದ್ದ ಇನೋವಾ ಕಾರನ್ನು ಪತ್ತೆಹಚ್ಚಿದ ಸಂದರ್ಭ ಚಾಲಕ ಡ್ರೆöÊವಿಂಗ್ ಲೈಸನ್ಸ್ ಹೊಂದಿಲ್ಲದಿರುವುದು ಕಂಡುಬAದಿದೆ. ಅತೀ ವೇಗದ ಚಾಲನೆಗೆ ಮೋಟರ್ ವಾಹನ ಕಾಯ್ದೆ ಅನ್ವಯ ರೂ. ೩ ಸಾವಿರ ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ತಿಳಿಸಿದ್ದಾರೆ.