ಮನುಷ್ಯನಿಗೆ ಹವ್ಯಾಸಗಳು ಹೆಚ್ಚು. ಕೆಲವು ಒಳ್ಳೆಯ ಹವ್ಯಾಸಗಳನ್ನು ಮತ್ತೆ ಕೆಲವು ಕೆಟ್ಟ ಹವ್ಯಾಸಗಳನ್ನು ತನಗರಿವಿಲ್ಲದಂತೆಯೇ ಅಭ್ಯಸಿಸಿಕೊಂಡಿರುತ್ತಾನೆ. ತಿಳುವಳಿಕೆ ಬಂದ ನಂತರ ಕೆಟ್ಟ ಹವ್ಯಾಸಗಳನ್ನು ಕೈಬಿಟ್ಟು ಒಳ್ಳೆಯದನ್ನು ರೂಢಿಸಿಕೊಳ್ಳುತ್ತಾನೆ. ಆದರೆ ಕೆಲ ಸಂದರ್ಭದಲ್ಲಿ ಕೆಟ್ಟ ಹವ್ಯಾಸಗಳನ್ನು ಕೈಬಿಡಲಾಗದೆ ಪರಿತಪಿಸುತ್ತಾರೆ. ಬಾಲ್ಯದಲ್ಲಿಯೇ ಕಲಿತ ಕೆಲವು ಹವ್ಯಾಸವನ್ನು ಕೆಟ್ಟದು ಒಳ್ಳೆಯದು ಎಂದು ಗುರುತಿಸಿಕೊಳ್ಳಲಾಗದೆ ಅದರ ದಾಸರಾಗುತ್ತಾರೆ.
ದಾಸತ್ವ ಹೇಗಿರುತ್ತದೆ ಎಂದರೆ ತಮ್ಮ ಇಡೀ ದೇಹವನ್ನು ಅನಾರೋಗ್ಯವನ್ನಾಗಿಸಿಕೊಂಡು ತಮ್ಮ ಜೀವನವನ್ನು ತಾವೇ ನರಕವಾಗಿಸಿಕೊಳ್ಳುವುದರೊಂದಿಗೆ ಇಡೀ ಕುಟುಂಬವನ್ನು ಮಾನಸಿಕ, ದೈಹಿಕ, ಆರ್ಥಿಕವಾಗಿ ಜರ್ಜರಿತವಾಗುವಂತೆ ಮಾಡಿಕೊಳ್ಳುತ್ತಾರೆ.
ಈ ರೀತಿ ದಾಸರನ್ನಾಗಿ ಮಾಡುವುದರಲ್ಲಿ ತಂಬಾಕು ಕೂಡ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಹಲವು ವಿಧಗಳಲ್ಲಿ ತಂಬಾಕನ್ನು ಬಳಸುತ್ತಾರೆ. ಈ ಎಲ್ಲಾ ಹಿನ್ನೆಲೆಯೊಂದಿಗೆ ತಂಬಾಕು ಭಾರತಕ್ಕೆ ಹೇಗೆ ಬಂದಿತು ಎಂದು ಅನ್ವೇಷಿಸಿದರೆ ೧೭ನೇ ಶತಮಾನದ ಆರಂಭದಲ್ಲಿ ಸುಮಾರು ೧೬೦೫ ರಲ್ಲಿ ಪೋರ್ಚುಗೀಸ್ ವ್ಯಾಪಾರಿಗಳಿಂದ "ಔಷಧೀಯ ಸಸ್ಯ" ರೂಪದಲ್ಲಿ ಕಾಲಿಟ್ಟಿತು. ನಂತರ ವ್ಯಾಪಾರೀ ಬೆಳೆಯಾಗಿ ದೇಶದಾದ್ಯಂತ ಹರಡಿತು.
ಕ್ರಿಸ್ಟೋಫರ್ ಕೊಲಂಬಸ್ ಭಾರತದೊಂದಿಗೆ ವ್ಯಾಪಾರ ಪ್ರಾರಂಭಿಸಿದಾಗ ತಂಬಾಕಿನ ಬೀಜಗಳನ್ನು ಮತ್ತು ಉತ್ಪನ್ನಗಳನ್ನು ಭಾರತಕ್ಕೆ ತಂದರು. ಆರಂಭದಲ್ಲಿ ಇದರ ಬಳಕೆ ನೋವು ನಿವಾರಕವಾಗಿ ಹಾಗೂ ಅನೇಕ ರೋಗಗಳಿಗೆ ರಾಮಬಾಣವಾಗಿ ಉಪಯೋಗಿಸುವುದೆಂದು ನಂಬಲಾಗಿತ್ತು. ಪೋರ್ಚುಗೀಸರು ಇದರ ವಾಣಿಜ್ಯ ಮಹತ್ವವನ್ನು ತಿಳಿದು ಲಾಭದಾಯಕ ಬೆಳೆಯಾಗಿ ಬೆಳೆಯಲು ಮುಂದಾದರು. ನಂತರ ಜನಸಾಮಾನ್ಯರ ಆಕರ್ಷಣೆಗೆ ಒಳಗಾಗಿ ಬಳಕೆಗೆ ಸಾಕಷ್ಟು ವಿರೋಧಗಳು ಮತ್ತು ಬಹಿಷ್ಕಾರಗಳು ಇದ್ದರೂ ಭಾರತದ ಪ್ರಮುಖ ಕೃಷಿ ಉತ್ಪನ್ನಗಳಲ್ಲಿ ಒಂದಾಯಿತು. ಭಾರತವು ಇಂದು ವಿಶ್ವದಲ್ಲೇ ಅತಿ ಹೆಚ್ಚು ತಂಬಾಕು ಉತ್ಪಾದಿಸುವ ದೇಶಗಳಲ್ಲಿ ಒಂದಾಗಿದೆ.
ಇAಗ್ಲಿಷ್ ಪದ ಟೊಬೆಕೊ ಸ್ಪ್ಯಾನಿಷ್ ಪದ ಟಬಾಕೊದಿಂದ ಹುಟ್ಟಿಕೊಂಡಿದೆ. ತಂಬಾಕಿಗೆ ಹೊಗೆ ಸೊಪ್ಪು, ಕಡ್ಡಿಪುಡಿ ಎಂಬ ಹೆಸರು ಇದೆ. ಇದನ್ನು ಬೀಡಿ, ಸಿಗರೇಟ್ನಲ್ಲಿ ಉಪಯೋಗಿಸುತ್ತಾರೆ. ಹಾಗೆಯೇ ವೀಳ್ಯದೆಲೆಯನ್ನು ತಿನ್ನುವಾಗಲು ಅದರೊಂದಿಗೆ ಮಾದಕ ದ್ರವ್ಯದಂತೆ ಬಳಸುತ್ತಾರೆ. ಹಿಂದೆ ಜನಪದರು ವೀಳ್ಯದೆಲೆಯೊಂದಿಗೆ ತಂಬಾಕು ಸೇವನೆ ಮಾಡುವಾಗ ಅದರ ರಸವನ್ನು ಬಾಯಿಂದ ಹೊರಗೆ ಉಗಿದು ವೀಳ್ಯದೆಲೆಯನ್ನು ಸೇವಿಸುತ್ತಿದ್ದರು. ಆದರೆ ಇಂದು ಹೊಗೆಸೊಪ್ಪನ್ನು ನೇರವಾಗಿ ಬಳಸುತ್ತಿರುವುದು ದೇಹಕ್ಕೆ ಹಾನಿಕಾರಕವಾಗಿ ಮದನಶೆಯನ್ನುಂಟು ಮಾಡುತ್ತದೆ.
ಇದಕ್ಕೆ ಪೂರಕವಾಗಿ "ತಂಬಾಕು ರಹಿತ ದಿನ"ವನ್ನಾಗಿ ಮೇ ೩೧ನ್ನು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕು ಮತ್ತು ಅದರ ಉತ್ಪನ್ನದ ಸೇವನೆಯಿಂದ ಉಂಟಾಗುವ ಅಪಾಯ, ಕುಟುಂಬ, ಸಮಾಜ ಮತ್ತು ಪರಿಸರದ ಮೇಲೆ ಅದರ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ "ವಿಶ್ವ ತಂಬಾಕು ರಹಿತ ದಿನ" ಆಚರಿಸಲು ಈ ದಿನವನ್ನು ಗೊತ್ತುಪಡಿಸಿದೆ.
ಡಬ್ಲೂö್ಯಹೆಚ್ಓ ಸದಸ್ಯ ರಾಷ್ಟçಗಳು ೧೯೮೭ ರಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ರಚಿಸಿ ತಂಬಾಕು ಬಳಕೆಯು ದೇಹದ ಮೇಲೆ ಉಂಟುಮಾಡುವ ದುಷ್ಪರಿಣಾಮವನ್ನು ಮನದಟ್ಟು ಮಾಡಲು ವಿಶ್ವಾದ್ಯಂತ ಪ್ರತಿ ವರ್ಷ ೮ ಮಿಲಿಯನ್ಗಿಂತಲೂ ಹೆಚ್ಚು ಸಾವುಗಳಿಗೆ ಕಾರಣವಾಗುತಿರುವುದನ್ನು ಪ್ರಚುರಪಡಿಸಲು ಈ ದಿನವನ್ನು ಆಯ್ಕೆ ಮಾಡಿದೆ. ಧೂಮಪಾನ ಮಾಡದವರು ಕೂಡ ಹೊಗೆಗೆ ಒಡ್ಡಿಕೊಳ್ಳುವುದರಿಂದ ೧.೨ ಮಿಲಿಯನ್ ಸಾವುಗಳು ಸಂಭವಿಸುತ್ತಿವೆ ಎಂದು ವರದಿ ಕೂಡ ಇದೆ.
ತಂಬಾಕು ಹೊಗೆಯಲ್ಲಿರುವ ವಿಷಕಾರಿ ರಾಸಾಯನಿಕಗಳಾದ ಕಾರ್ಬನ್ ಮಾನಾಕ್ಸೈಡ್ , ಸೈನೈಡ್ ಮತ್ತು ಕಾರ್ಸಿನೋಜೆನ್, ಹೃದಯ, ಶ್ವಾಸಕೋಶದ ಕಾಯಿಲೆಗಳು ಮತ್ತು ಕ್ಯಾನ್ಸರ್ಗೆ ಕಾರಣವಾಗುತ್ತವೆ ಎಂದು ಸಾಬೀತಾಗಿರುವುದರಿಂದ ತಂಬಾಕು ಧೂಮಪಾನವು ಆರೋಗ್ಯಕ್ಕೆ ಹಾನಿ ಮಾಡುತ್ತದೆ.
ಧೂಮಪಾನ ಮಾಡದವರಿಗೆ ಧೂಮಪಾನ ಮಾಡುವವರು ಹೊರಹಾಕಿದ ತಂಬಾಕಿನ ಹೊಗೆಯನ್ನು ಉಸಿರಾಡುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಉಂಟಾಗುತ್ತದೆ. ಮಕ್ಕಳು ತಂಬಾಕು ಹೊಗೆಗೆ ಒಡ್ಡಿಕೊಳ್ಳುವುದರಿಂದ ಉಸಿರಾಟದ ಕಾಯಿಲೆಗಳು, ಕಿವಿ ಕಾಯಿಲೆ ಮತ್ತು ಆಸ್ತಮಾ ಕಾಯಿಲೆಗೆ ಒಳಗಾಗುತ್ತಿದ್ದಾರೆ.
ಯುನೈಟೆಡ್ ಸ್ಟೇಟ್ಸ್ನಲ್ಲಿ ಪ್ರತಿ ವರ್ಷ, ಹೊಗೆಗೆ ಒಡ್ಡಿಕೊಳ್ಳುವುದರಿಂದ ೨೪,೫೦೦ ಶಿಶುಗಳು ಕಡಿಮೆ ಜನನ ತೂಕದೊಂದಿಗೆ ಜನಿಸುತ್ತವೆ. ೭೧,೯೦೦ ಅಕಾಲಿಕ ಜನನಗಳಾಗಿವೆ ಎಂದು ವರದಿ ನೀಡಿದೆ.
ಭಾರತದ ತಂಬಾಕು ಮಂಡಳಿಯ ಪ್ರಧಾನ ಕಚೇರಿ ಆಂಧ್ರಪ್ರದೇಶ ರಾಜ್ಯದ ಗುಂಟೂರಿನಲ್ಲಿದೆ. ಭಾರತದಲ್ಲಿ ೯೬,೮೬೫ ನೋಂದಾಯಿತ ತಂಬಾಕು ರೈತರಿದ್ದಾರೆ. ನೋಂದಾಯಿಸಿಕೊಳ್ಳದವರೂ ಇದ್ದಾರೆ. ಭಾರತದ ಕೃಷಿ ಭೂಮಿಯ ಸುಮಾರು ಶೇ. ೦.೨೫ ತಂಬಾಕು ಉತ್ಪಾದನೆಗೆ ಬಳಸಲ್ಪಡುತ್ತದೆ.
೧೯೪೭ ರಿಂದ ಭಾರತ ಸರ್ಕಾರವು ತಂಬಾಕು ಉದ್ಯಮದ ಬೆಳವಣಿಗೆಗೆ ಬೆಂಬಲ ನೀಡಿದೆ. ಭಾರತವು ತಮಿಳುನಾಡು, ಆಂಧ್ರಪ್ರದೇಶ, ಪಂಜಾಬ್, ಬಿಹಾರ, ಮೈಸೂರು ಮತ್ತು ಪಶ್ಚಿಮ ಬಂಗಾಳದಲ್ಲಿ ಏಳು ತಂಬಾಕು ಸಂಶೋಧನಾ ಕೇಂದ್ರಗಳನ್ನು ಹೊಂದಿದೆ.
ತAಬಾಕು ಕುಟುಂಬದವರ ಹೃದಯಗಳನ್ನು ಒಡೆದು ಸ್ವದೇಹವನ್ನು ಸುಟ್ಟು ಸ್ಫೋಟಿಸುತ್ತದೆ. ತಂಬಾಕಿನಿAದ ಶ್ವಾಸಕೋಶದ ಆರೋಗ್ಯ ಸರ್ವನಾಶವಾಗುತ್ತದೆ. ಉದ್ಯಮ ಯುವ ಪೀಳಿಗೆಯನ್ನು ಆಕರ್ಷಿಸಲು ತಂತ್ರಗಳನ್ನು ಹೆಣೆಯುತ್ತವೆ.
ತಂಬಾಕಿನ ಬದಲು ಆಹಾರ ಬೆಳೆಯನ್ನು ಬೆಳೆದು ಆರೋಗ್ಯ ನೀಡಬಹುದು. ತಂಬಾಕು ಸೇವನೆಯಿಂದ ಮಕ್ಕಳನ್ನು ರಕ್ಷಿಸಬೇಕು. ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅತಿ ಸಣ್ಣದಾಗಿ ನಮೂದಿಸಿ ಬೇರೆಲ್ಲವೂ ಮನಸ್ಸನ್ನು ಆಕರ್ಷಿಸುವಂತೆ ಪ್ಯಾಕ್ ಮಾಡಲಾಗಿರುತ್ತದೆ.
ಪೋಷಕರು ಮಕ್ಕಳಿಗೆ ಬಾಲ್ಯದಿಂದಲೇ ಇದರ ಸೇವನೆಯ ಕುರಿತು ಮಾರ್ಗದರ್ಶನ ನೀಡಬೇಕು. ದೊಡ್ಡ ದೊಡ್ಡ ನಗರದ ದೊಡ್ಡ ಆರೋಗ್ಯ ಕೇಂದ್ರಗಳಲ್ಲಿ ತಂಬಾಕು ಸೇವನೆಯಿಂದ ಬಾಯಿ, ಶ್ವಾಸಕೋಶದ ಕ್ಯಾನ್ಸರ್ನ ಚಿತ್ರಗಳನ್ನು ನೇತು ಹಾಕಲಾಗಿರುತ್ತದೆ. ಇಂತಹ ಚಿತ್ರಣಗಳನ್ನು ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಪರಿಚಯಿಸಿ ಮನಸ್ಸಿನಲ್ಲಿ ಜಾಗೃತಿ ಮೂಡಿಸಬೇಕಿದೆ. ಭಯ ಹುಟ್ಟಿಸುವ ಭೀಕರವಾಗಿರುವಂತಹ ಬಾಯಿ ಹುಣ್ಣು ಕ್ಯಾನ್ಸರ್ನ ಚಿತ್ರಗಳನ್ನು ತಪ್ಪದೇ ಪರಿಚಯಿಸಬೇಕಿದೆ. ಶಾಲಾ ಹಂತದಲ್ಲಿಯೇ ಪಠ್ಯಪುಸ್ತಕದಲ್ಲಿ ತಂಬಾಕು ಹಾನಿಯ ಕುರಿತು ಮಾರ್ಗದರ್ಶನದ ಅತ್ಯವಶ್ಯಕತೆ ಇದೆ. ವಾಹನಗಳಿಗೆ ಇಲಿಗಳು ದಾಳಿ ಮಾಡುವುದನ್ನು ತಪ್ಪಿಸಲು ಹೊಗೆಸೊಪ್ಪನ್ನು ನಶೆಯಂತೆ ಬಳಸಲಾಗುತ್ತದೆ ಹೀಗಿರಬೇಕಾದರೆ ಇದು ಮನುಷ್ಯನ ದೇಹಕ್ಕೆ ಉಸಿರಾಟಕ್ಕೆ ಎಷ್ಟು ತೊಂದರೆ ನೀಡುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ. ತಂಬಾಕು ಬೆಳೆಯುವ ಹೊಲದಲ್ಲಿ ಹೆಚ್ಚು ಬಾಲಕಾರ್ಮಿಕರು ದುಡಿಯುವುದನ್ನು ತಪ್ಪಿಸಬೇಕು.
"ತಂಬಾಕಿನಲ್ಲಿ ಆರೋಗ್ಯ ಅರಸಲು ಅಸಾಧ್ಯ".
- ಮನ ಕೆ.ಆರ್., ಅಂತಿಮ ಬಿಸಿಎ,
ಕಾವೇರಿ ಕಾಲೇಜು ಗೋಣಿಕೊಪ್ಪಲು.