ಕಣಿವೆ, ಮೇ ೨೯: ಮುಳ್ಳುಸೋಗೆ ಗ್ರಾಮ ದೇವತೆ ದೊಡ್ಡಮ್ಮ ದೇವರ ವಾರ್ಷಿಕ ಪೂಜೋತ್ಸವ ಗುರುವಾರ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವತಾ ಮೂರ್ತಿಗೆ ಬಗೆ ಬಗೆಯ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು. ಇದಕ್ಕೂ ಮುನ್ನ ದೇವಾಲಯದ ಆವರಣದಲ್ಲಿ ಹೋಮ ಹವನಗಳು ನಡೆದವು. ಮಧ್ಯಾಹ್ನ ಮಹಾಮಂಗಳಾರತಿಯೊAದಿಗೆ ನೆರೆದ ಭಕ್ತರಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಿತು.

ಕಣಿವೆ ರಾಮಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ ಮತ್ತು ಮಹಾಬಲ ಅವರ ನೇತೃತ್ವದಲ್ಲಿ ಪೂಜಾ ವಿಧಿಗಳು ನೆರವೇರಿದವು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಎಂ.ಎ. ಕುಮಾರ ಸ್ವಾಮಿ, ಉಪಾಧ್ಯಕ್ಷ ಎಂ.ಕೆ. ಧನರಾಜು, ಕಾರ್ಯದರ್ಶಿ ಎಂ.ಹೆಚ್. ಅಣ್ಣೇಗೌಡ, ಸಹಕಾರ್ಯದರ್ಶಿ ಎಂ. ಮಂಜುನಾಥ್, ಖಜಾಂಚಿ ಎಂ.ಆರ್. ಸೋಮಶೇಖರ್, ಸದಸ್ಯರಾದ ಎಂ.ಆರ್. ನಂಜುAಡ, ಎಂ.ಸಿ. ಮಂಜುನಾಥ್, ಗೋವಿಂದರಾಜ್, ವಿಶ್ವನಾಥ್, ಅಪ್ಪಣ್ಣ, ಸಂತೋಷ್, ತಮ್ಮಯ್ಯ, ಜಯರಾಜ್, ಗಣಪತಿ, ವಿಶ್ವನಾಥ್, ಸೋಮ ಮೊದಲಾದವರಿದ್ದರು.