ವೀರಾಜಪೇಟೆ, ಮೇ.೨೯: ಕೊಡವ ಸಂಸ್ಕೃತಿಯ ಉಳಿವಿಗೆ ಯುವಕರು ಸದಾ ಮುಂಚೂಣಿಯಲ್ಲಿರಬೇಕು. ಇದಕ್ಕೆ ಪೋಷಕರು ಪ್ರೋತ್ಸಾಹ, ಸಹಕಾರ ನೀಡುವಂತಾಗಬೇಕು ಎಂದು ಕೊಡವ ಸಂಘ ಒಕ್ಕೂಟದ ಅಧ್ಯಕ್ಷರಾದ ಮಾದಂಡ ಎಸ್ ಪೂವಯ್ಯ ಹೇಳಿದರು.

ವೀರಾಜಪೇಟೆ ಕೊಡವ ಸಮಾಜದ ಆಡಳಿತ ಮಂಡಳಿಯ ಸಹಯೋಗದೊಂದಿಗೆ ವೀರಾಜಪೇಟೆ ಕೊಡವ ಸಂಘ ಒಕ್ಕೂಟದಿಂದ ಕೊಡವ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸುಮಾರು ೪೦ ದಿನಗಳ ಕಾಲ ನಡೆದ ‘ಕೊಡವ ಆಟ್ ಪಾಟ್ ಪಡಿಪು’ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊಡವ ಸಂಸ್ಕೃತಿ, ಆಚಾರ-ವಿಚಾರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಟ್‌ಪಾಟ್ ಪಡಿಪು ಕಾರ್ಯಕ್ರಮಕ್ಕೆ ಸಂಘ ಸಂಸ್ಥೆಗಳು ಮುಂಚೂಣಿಯಲ್ಲಿರಬೇಕೆAದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯವಾಗಿ ಬಾಳೊಪಾಟ್, ಉಮ್ಮತ್ತಾಟ್, ವಸ್ತç ಹಾಗೂ ಚೇಲೆ ಕಟ್ಟುವ ಬಗ್ಗೆ ತರಬೇತಿ ನೀಡಲಾಯಿತು. ಬಾಳೊಪಾಟ್ ಮುಖ್ಯ ತರಬೇತುದಾರರಾಗಿ ಅಚ್ಚಪಂಡ ಪಟ್ಟು ಅಯ್ಯಪ್ಪ, ಅಪ್ಪನೆರವಂಡ ರತಿ ಕಾರ್ಯಪ್ಪ ಭಾಗವಹಿಸಿದ್ದರು. ಉಮ್ಮತ್ತಾಟ್ ತರಬೇತಿಯನ್ನು ಚೊಟ್ಟಂಡ ತಶ್ವಿ ಸೋಮಯ್ಯ ಅವರು ನೀಡಿದರು. ಸಂಚಾಲಕರಾಗಿ ಒಕ್ಕೂಟದ ಉಪಾಧ್ಯಕ್ಷ ಮುಂಡ್ಯೋಳAಡ ಅಜಿತ್ ಸುಬ್ಬಯ್ಯ, ಒಕ್ಕೂಟದ ಗೌರವ ಕಾರ್ಯದರ್ಶಿ ಬಾಚಿರ ಜಗದೀಶ್, ಮೂಕೊಂಡ ಪ್ರೀತ್ ಈರಪ್ಪ ಹಾಗೂ ಚಿಕ್ಕಪೇಟೆ ಕೇರಿಯ ಉಪಾಧ್ಯಕ್ಷರಾದ ಬಿದ್ದಂಡ ನಾಣಿ ದೇವಯ್ಯ ಅವರುಗಳು ನೆರವೇರಿಸಿದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೊಡವ ಸಮಾಜದ ಅಧ್ಯಕ್ಷರಾದ ಅಮ್ಮಣಿಚಂಡ ರವಿ ಉತ್ತಪ್ಪ, ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಹಾಗೂ ನಿವೃತ್ತ ಪ್ರಾಂಶುಪಾಲೆ ತಾತಂಡ ಜ್ಯೋತಿ ಪ್ರಕಾಶ್ ಅವರುಗಳು ಕೊಡವ ಕಲೆ ಸಂಸ್ಕೃತಿ, ಪದ್ಧತಿ, ಪರಂಪರೆಗಳನ್ನು ಉಳಿಸಿ ಬೆಳೆಸುವ ಬಗ್ಗೆ ಮಾರ್ಗದರ್ಶನ ನೀಡಿದರು.

ಶಿಬಿರದಲ್ಲಿ ಪಾಲ್ಗೊಂಡವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಚೊಟ್ಟಂಡ ತಶ್ವಿ, ಅಜಿತ್ ಸುಬ್ಬಯ್ಯ, ಬಾಚಿರ ಜಗದೀಶ್, ಬಿದ್ದಂಡ ನಾಣಿ ದೇವಯ್ಯ ಕಾರ್ಯಕ್ರಮ ನಿರ್ವಹಣೆ ಮಾಡಿದರು.