ಕೋವರ್‌ಕೊಲ್ಲಿ ಇಂದ್ರೇಶ್

ಮುAಬೈ, ಮೇ ೨೯: ದೇಶದ ಪ್ರಮುಖ ಕಾಫಿ ಚಿಲ್ಲರೆ ಸರಪಳಿ ಮಾರಾಟ ಸಂಸ್ಥೆ ಕಾಫಿ ಡೇ ಎಂಟರ್‌ಪ್ರೆöÊಸಸ್ ಷೇರುಗಳು ಶುಕ್ರವಾರ ಸತತ ಐದನೇ ದಿನ ಭರ್ಜರಿ ಏರಿಕೆ ದಾಖಲಿಸಿವೆ. ರಾಷ್ಟಿçÃಯ ಷೇರು ವಿನಿಮಯ ಕೇಂದ್ರದಲ್ಲಿ (ಎನ್‌ಎಸ್‌ಇ) ಶುಕ್ರವಾರ ಶೇ. ೨೦ ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿ ರೂ. ೩೪.೭೮ಕ್ಕೆ ತಲುಪಿದೆ. ಕಳೆದ ಮೂರು ದಿನಗಳಿಂದ ಅಪ್ಪರ್ ಫ್ರೀಜ್ (uಠಿಠಿeಡಿ ಜಿಡಿeeze) ಆಗಿದ್ದ ಷೇರು ಕಳೆದ ಐದು ವಹಿವಾಟು ದಿನಗಳಲ್ಲಿ ಶೇ. ೪೧ ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿವೆ.

ಸಿದ್ದರಾಮಯ್ಯ ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕಾಫಿ ಡೇ ಎಂಟರ್‌ಪ್ರೆöÊಸಸ್ ಷೇರುಗಳು ಗಮನ ಸೆಳೆದಿವೆ, ವರದಿಗಳ ಪ್ರಕಾರ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿ ಅಭ್ಯರ್ಥಿಯಾಗಿದ್ದಾರೆ. ಶಿವಕುಮಾರ್ ಅವರ ಹಿರಿಯ ಮಗಳು ಐಶ್ವರ್ಯ ಮೂಲಕ ಕೆಫೆ ಕಾಫಿ ಡೇ ಕುಟುಂಬ ಸಂಪರ್ಕವನ್ನು ಹೊಂದಿದ್ದಾರೆ, ಐಶ್ವರ್ಯ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಮಗಳು ಸಿಇಒ ಆಗಿರುವ ಕೆಫೆ ಕಾಫಿ ಡೇ (ಸಿಸಿಡಿ) ಕಂಪೆನಿಯ ಮಾಳವಿಕಾ ಹೆಗ್ಡೆ ಅವರ ಪುತ್ರ ಅಮರ್ತ್ಯ ಹೆಗ್ಡೆ ಅವರ ಪತ್ನಿ ಆಗಿದ್ದಾರೆ. ೧೯೯೬ ರಲ್ಲಿ ಬೆಂಗಳೂರಿನಲ್ಲಿ ಸಿಸಿಡಿ ಸ್ಥಾಪಿಸಿದ ದಿ. ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರು ೨೦೧೯ ರಲ್ಲಿ ದುರಂತ ಅಂತ್ಯದ ನಂತರ ಮಾಳವಿಕಾ ಕಂಪೆನಿಯ ಚುಕ್ಕಾಣಿ ಹಿಡಿದಿದ್ದಾರೆ.

ಕಾಫಿ ಡೇ ಎಂಟರ್‌ಪ್ರೈಸಸ್ ಷೇರುಗಳು ಕಳೆದ ಕೆಲವು ವರ್ಷಗಳಿಂದ ಒತ್ತಡದಲ್ಲಿವೆ ಮತ್ತು ಮಾರುಕಟ್ಟೆಗಳಲ್ಲಿ ಗಮನಾರ್ಹವಾಗಿ ಕಳಪೆ ಪ್ರದರ್ಶನ ನೀಡಿವೆ. ಕಳೆದ ಐದು ದಿನಗಳ ಏರಿಕೆಗೂ ಮುನ್ನ ರಾಷ್ಟಿçÃಯ ಷೇರು ವಿನಿಮಯ ಕೇಂದ್ರದ ದತ್ತಾಂಶದ ಪ್ರಕಾರ ನಿಫ್ಟಿ ೫೦ ಸೂಚ್ಯಂಕದಲ್ಲಿ ಇರುವ ಈ ಷೇರು ಈ ವರ್ಷ ಶೇ. ೯ ರಷ್ಟು ಕುಸಿತ ಕಂಡಿದೆ. ಕಾಫಿ ಡೇ ಎಂಟರ್‌ಪ್ರೈಸಸ್ ಷೇರುಗಳು ದೀರ್ಘಾವಧಿಯಲ್ಲಿ ನಕಾರಾತ್ಮಕ ಆದಾಯವನ್ನು ನೀಡುತ್ತಲೇ ಇವೆ. ದತ್ತಾಂಶದ ಪ್ರಕಾರ, ಷೇರು ಮೂರು ವರ್ಷಗಳಲ್ಲಿ ಶೇ. ೭ ಮತ್ತು ಐದು ವರ್ಷಗಳಲ್ಲಿ ಶೇ. ೬ ರಷ್ಟು ಕುಸಿದಿದೆ, ನಿಫ್ಟಿ ೫೦ ಗಿಂತ ತೀವ್ರವಾಗಿ ಕಳಪೆ ಪ್ರದರ್ಶನ ನೀಡಿದೆ, ಇದು ಅದೇ ಅವಧಿಯಲ್ಲಿ ಕ್ರಮವಾಗಿ ಶೇ. ೨೮ ಮತ್ತು ಶೇ. ೫೪ ರಷ್ಟು ಏರಿಕೆ ಕಂಡಿದೆ.

ಏತನ್ಮಧ್ಯೆ ಕಾಕತಾಳೀಯವೆಂಬAತೆ ಕಾಫಿ ಡೇ ಎಂಟರ್‌ಪ್ರೈಸಸ್ ೨೦೨೬ ರ ನಾಲ್ಕನೇ ತ್ರೈಮಾಸಿಕದ ಫಲಿತಾಂಶ ಹೊರಬಿದ್ದಿದ್ದು ರೂ. ೧೩೨ ಕೋಟಿ ನಿವ್ವಳ ಲಾಭವನ್ನು ವರದಿ ಮಾಡಿದೆ. ಆದರೆ ೨೦೨೫ ರ ಕಿ೪ ರಲ್ಲಿ ಕಂಪೆನಿ ರೂ. ೩೩ ಕೋಟಿ ನಷ್ಟವನ್ನು ಅನುಭವಿಸಿತ್ತು.