ಮಡಿಕೇರಿ, ಮೇ.೨೯: ಅಂಚೆ ಅದಾಲತ್‌ನ ಮುಂದಿನ ಸಭೆಯು ಜೂನ್ ೮ ರಂದು ಮಧ್ಯಾಹ್ನ ೧೨ ಗಂಟೆಗೆ ಕೊಡಗು ಅಂಚೆ ವಿಭಾಗದ, ವಿಭಾಗೀಯ ಕಚೇರಿ, ಸಿದ್ದಾಪುರ ರಸ್ತೆ ಅಶೋಕ್ ಪುರದಲ್ಲಿ ನಡೆಯಲಿದೆ.

ಸಭೆಯಲ್ಲಿ ಕೊಡಗು ಅಂಚೆ ವಿಭಾಗದ ಅಂಚೆ ಸೇವೆಗೆ ಸಂಬAಧಿಸಿದ ಎಲ್ಲಾ ತರಹದ ದೂರುಗಳನ್ನು ಸ್ವೀಕರಿಸಿ ಚರ್ಚಿಸಲಾಗುತ್ತದೆ. ದೂರುಗಳಿದ್ದಲ್ಲಿ ‘ಅಂಚೆ ಅದಾಲತ್’ ಎಂದು ಬರೆದು ಅಂಚೆ ಅಧೀಕ್ಷಕರು, ಕೊಡಗು ಅಂಚೆ ವಿಭಾಗ, ಮಡಿಕೇರಿ ಇವರಿಗೆ ಜೂನ್೫ ರೊಳಗೆ ತಲುಪುವಂತೆ ಕಳುಹಿಸಲು ಕೋರಿದೆ. ಜೂನ್ ೮ ರಂದು ನಡೆಯುವ ಸಭೆಯಲ್ಲಿ ಭಾಗವಹಿಸಬಹುದು ಎಂದು ಕೊಡಗು ಅಂಚೆ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.