ಕೂಡಿಗೆ, ಮೇ ೨೯: ತೊರೆನೂರು ಗ್ರಾಮ ದೇವತೆ ಶ್ರೀ ದೊಡ್ಡಮ್ಮ ಹಾಗೂ ಶ್ರೀ ಚಿಕ್ಕಮ್ಮ ದೇವಿಯ ವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವ ಅದ್ದೂರಿಯಾಗಿ ನೆರವೇರಿತು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ. ಮುಂದಿನ ದಿನಗಳಲ್ಲಿ ಬಸವೇಶ್ವರ ದೇವಾಲಯ ಅಭಿವೃದ್ಧಿಗೆ ಮೂರು ಲಕ್ಷ ರೂ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಶ್ರೀ ಬಸವೇಶ್ವರ ದೇವಸ್ಥಾನ ಟ್ರಸ್ಟ್, ಮತ್ತು ಕ್ರೀಡಾ ಸಮಿತಿಯ ವತಿಯಿಂದ ನಡೆದ ಗ್ರಾಮ ದೇವತೆ ಹಬ್ಬ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕ್ರೀಡಾಕೂಟದ ವಿವಿಧ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನ ಸಮಿತಿ ಅಧ್ಯಕ್ಷ ಟಿ.ಬಿ. ಜಗದೀಶ್, ಉಪಾಧ್ಯಕ್ಷ ಟಿ.ಬಿ. ಚಿದಾನಂದ, ಕಾರ್ಯದರ್ಶಿ ಟಿ.ಎಲ್. ಮಹೇಶ್, ಪ್ರಮುಖರಾದ ಟಿ.ಡಿ. ಈಶ್ವರ್, ಟಿ.ಜಿ. ಶಿವಣ್ಣ, ಎಚ್.ಬಿ. ಚಂದ್ರಪ್ಪ, ಟಿ.ಟಿ. ಗೋವಿಂದ, ಟಿ.ಸಿ. ಶಿವಕುಮಾರ್, ತ್ರಿಣೇಶ್, ಟಿ.ಡಿ. ಶಿವರಾಜ್, ಮಂಜುನಾಥ್, ಕೆ.ಪಿ.ಸಿ.ಸಿ. ಸದಸ್ಯ ನಟೇಶಗೌಡ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್, ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಎಸ್. ಕೃಷ್ಣ ಗೌಡ, ಶುಂಠಿ ರಾಮಣ್ಣ, ಶಿರಂಗಾಲ ಚಂದ್ರಶೇಖರ್, ವಸಂತ್ ಹಾಗೂ ಇನ್ನಿತರರು ಇದ್ದರು.